March 21, 2026

NSUI ರಾಜ್ಯ ಸಮಿತಿ ಉಪಾಧ್ಯಕ್ಷ ಫಾರೂಕ್ ಬಾಯಬೆಯವರಿಗೆ ‘ರಾಜ್ಯದ ಅತ್ಯುತ್ತಮ ಪದಾಧಿಕಾರಿ’ ಪ್ರಶಸ್ತಿ ಪ್ರಧಾನ

0
IMG-20230219-WA0020.jpg

ಬೆಂಗಳೂರಿನ ಶಿರೂರ್ ಪಾರ್ಕಿನಲ್ಲಿ ನಡೆದ ರಾಜ್ಯ NSUI ಕಾರ್ಯಕಾರಿಣಿ ಸಭೆಯಲ್ಲಿ KPCC ಅಧ್ಯಕ್ಷ D K ಶಿವಕುಮಾರ್ ಅವರು ರಾಜ್ಯ NSUI ಸಮಿತಿ ಉಪಾಧ್ಯಕ್ಷರಾದ ಫಾರೂಕ್ ಬಾಯಬೆಯವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರಧಾನ ಮಾಡಿದರು.

2014ರಿಂದ ನಗರ ಹಾಗೂ ತಾಲೂಕು ಮಟ್ಟದಲ್ಲಿ NSUI ಸಂಘಟನೆಯಲ್ಲಿ ಸಕ್ರಿಯರಾಗಿ ವಿವಿಧ ಜವಾಬ್ದಾರಿ ನಿರ್ವಹಿಸಿರುವ ಫಾರೂಕ್ ಅವರು ರಾಜ್ಯ ಮಟ್ಟದ ಇಂದಿರಾ ಕಾರ್ಯಗಾರ, ಪ್ರೇರಣಾ ಜಿಲ್ಲಾ ಕಾರ್ಯಾಗಾರ ಆಯೋಜಿಸುವ ಮೂಲಕ ಎನ್. ಎಸ್.ಯು.ಐಗೆ ಹೊಸ ಹುರುಪು ನೀಡಿದ್ದರು. ಇವರ ಉಸ್ತುವಾರಿಯಲ್ಲಿ ಬರುವ 6 ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಿದ ಸಾಧನೆಗಾಗಿ ಅವರಿಗೆ “ರಾಜ್ಯ ಉತ್ತಮ ಪದಾಧಿಕಾರಿ” ಪ್ರಶಸ್ತಿ ನೀಡಲಾಗಿದೆ. ಅವರು 2021ರಲ್ಲಿ NSUI ರಾಜ್ಯ ಸಮಿತಿಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. KPCC ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ರಾಜ್ಯ NSUI ಅಧ್ಯಕ್ಷ ಕೀರ್ತಿ ಗಣೇಶ್, ರಾಷ್ಟ್ರೀಯ ಕಾರ್ಯದರ್ಶಿ ಎರಿಕ್ ಸ್ಟಿಫನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!