May 11, 2026

ವಿಟ್ಲ: ಪ್ರಚೋದನಾಕಾರಿ ಭಾಷಣ: ವಿದ್ಯಾರ್ಥಿಗಳ ಭಾವನೆಗೆ ಧಕ್ಕೆ ತಂದು ಮಾನಸಿಕವಾಗಿ ಕಿರುಕುಳ ನೀಡಿರುವುದಾಗಿ ದೂರು ದಾಖಲು

0
IMG-20230219-WA0006.jpg

ವಿಟ್ಲ: ಕೋಮುಗಳ ನಡುವೆ ಸಂಘರ್ಷ ಉಂಟಾಗುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ವಿದ್ಯಾರ್ಥಿಗಳ ಭಾವನೆಗೆ ಧಕ್ಕೆ ತಂದು ಮಾನಸಿಕವಾಗಿ ಕಿರುಕುಳ ನೀಡಿರುವುದಾಗಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ ತಾಲೂಕು ಕೇಪು ಗ್ರಾಮದ ಅಡ್ಯನಡ್ಕದಲ್ಲಿರುವ ಧಾರ್ಮಿಕ ಸಂಘಟಣೆಯೊಂದರ ರಾಜಕಮಲ್‌ ಎಂಬ ಖಾಸಗಿ ಹಾಲ್‌ಗೆ ಜನತಾ ವಿದ್ಯಾ ಸಂಸ್ಥೆಯ ಮುಖ್ಯೋಪಾದ್ಯಯರಾದ ಟಿ ಆರ್ ನಾಯಕ್‌, ರಫೀಕ್‌ ಮಾಸ್ಟರ್ ಆತೂರ್ ಹಾಗೂ ನುಸ್ರುತುಲ್‌ ಇಸ್ಲಾಂ ಯಂಗ್‌ ಮೆನ್ಸ್ ಅಸೋಸಿಯಷನ್‌ ಸಂಘಟನಾಕಾರರು ಸದ್ರಿ ಶಾಲೆಯ ವಿಧ್ಯಾರ್ಥಿಗಳನ್ನು ಶೈಕ್ಷಣಿಕ ಕಾರ್ಯಾಗಾರದ ನೆಪದಲ್ಲಿ ಕರೆಸಿಕೊಂಡು, ಕಾರ್ಯಾಗಾರದಲ್ಲಿ ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿ ವಿಧ್ಯಾರ್ಥಿಗಳ ಭಾವನೆಗೆ ಧಕ್ಕೆ ತಂದು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಮಾಧವ ಮೂಲ್ಯ ಎಂಬವರು ದೂರು ನೀಡಿದ್ದಾರೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ .ಕ್ರ 23/2023 ಕಲಂ: 505 (2) ಜೊತೆಗೆ 34 ಬಾಧಂಸಂ ಯಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!