May 11, 2026

ಆ್ಯಂಬುಲೆನ್ಸ್‌ನಲ್ಲೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

0
IMG-20230219-WA0011.jpg

ರೈಸನ್‌: ಮಧ್ಯಪ್ರದೇಶದ ರೈಸನ್‌ ಜಿಲ್ಲೆಯಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಆ್ಯಂಬುಲೆನ್ಸ್‌ನಲ್ಲಿ 24 ವರ್ಷದ ಗರ್ಭಿಣಿಯೊಬ್ಬರು ತ್ರಿವಳಿ ಗಂಡು ಶಿಶುಗಳಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.

ಪಿಪ್ಲಿಯಾ ಗೋಲಿ ಗ್ರಾಮದ ಜ್ಯೋತಿ ಬಾಯಿ ಅವರು ಹೊಟ್ಟೆ ನೋವೆಂದು ಗೋಹರ್‌ಗಂಜ್‌ ಪ್ರಾಥಮಿಕ ಆಸ್ಪತ್ರೆಗೆ ಬಂದಿದ್ದು, ತಪಾಸಣೆ ನಡೆಸಿದ ವೈದ್ಯರು, ಮಹಿಳೆಯ ಪರಿಸ್ಥಿತಿ ಗಮನಿಸಿ, ಶೀಘ್ರ ಬೋಪಾಲ್‌ನ ಸುಲ್ತಾನಿಯಾ ಸರ್ಕಾರಿ ಆಸ್ಪತ್ರೆ ತೆರಳುವಂತೆ ತಿಳಿಸಿ108 ಆ್ಯಂಬುಲೆನ್ಸ್‌ನಲ್ಲಿ ಸ್ವತಃ ಡಾ. ಸಂದೀಪ್‌ ಮಾರನ್‌ ಅವರು ಜತೆಯಲ್ಲಿ ತೆರಳಿದರು. ಮಾರ್ಗ ಮಧ್ಯದಲ್ಲೇ ಆಕೆ ತ್ರಿವಳಿ ಶಿಶುಗಳಿಗೆ ಜನ್ಮ ನೀಡಿದ್ದಾರೆ.

ಇನ್ನು ತಾಯಿ-ಶಿಶುಗಳು ಆರೋಗ್ಯವಾಗಿದ್ದು, ಸದ್ಯ ಸುಲ್ತಾನಿಯಾ ಆಸ್ಪತ್ರೆಯ ನಿಗಾ ಘಟಕದಲ್ಲಿ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!