May 14, 2026

ಕಾಸರಗೋಡು: ವಿದ್ಯಾರ್ಥಿನಿ ಅಂಜುಶ್ರೀ ಪಾರ್ವತಿ ಸಾವು ಪ್ರಕರಣ: ಇಲಿಪಾಷಣ ಸೇವಿಸಿ ಸಾವು ಎಂದು ದೃಢ

0
IMG-20230214-WA0022.jpg

ಕಾಸರಗೋಡು: ಮಂಜೇಶ್ವರ ಗೋವಿಂದ ಪೈ ಕಾಲೇಜಿನ ವಿದ್ಯಾರ್ಥಿನಿಯಾಗಿದ್ಧ ಪೆರುಂಬಳ ಬೇನೂರಿನ ಅಂಜುಶ್ರೀ ಪಾರ್ವತಿಯ ಸಾವಿಗೆ ಇಲಿ ವಿಷ ಸೇವನೆ ಕಾರಣ ಎಂದು ರಾಸಾಯನಿಕ ತಪಾಸಣಾ ವರದಿಯಿಂದ ತಿಳಿದು ಬಂದಿರುವುದಾಗು ವರದಿಯಾಗಿದೆ.

ಅಂತಿಮ ಮರಣೋತ್ತರ ಪರೀಕ್ಷಾ ವರದಿಯಲ್ಲೂ ಇದನ್ನು ದೃಢ ಕರಿಸಿತ್ತು. ಜನವರಿ 7ರಂದು ಅಂಜುಶ್ರೀ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಟ್ಟಿದ್ದಳು.

ಇನ್ನು ಕೋಜೀಕ್ಕೊಡ್ ನ ಫಾರೆನ್ಸಿಕ್ ಪ್ರಯೋಗಾಲಯದಲ್ಲಿ ನಡೆಸಿದ ತಪಾಸಣೆ ಯಿಂದ ಇಲಿ ವಿಷ ಸೇವನೆ ಅಂಜುಶ್ರೀಯ ಸಾವಿಗೆ ಕಾರಣ ಎಂದು ಖಚಿತ ಪಡಿಸಿದೆ. ಈ ಕುರಿತ ವರದಿ ತನಿಖಾ ತಂಡಕ್ಕೆ ಲಭಿಸಿದೆ. ಮನೆಯಲ್ಲಿ ನಡೆಸಿದ ತಪಾಸಣೆಯಿಂದ ಆತ್ಮಹತ್ಯೆ ಪತ್ರ ವು ಪೊಲೀಸರಿಗೆ ಲಭಿಸಿತ್ತು.

ಕಾಸರಗೋಡು ನಗರ ಹೊರ ವಲಯದ ಹೋಟೆಲೊಂದರಿಂದ ಖರೀದಿಸಿದ್ದ ಆಹಾರ ಸೇವಿಸಿದ್ದ ರಿಂದ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಮೇಲ್ಪರಂಬ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಹೋಟೆಲ್ ಪೊಲೀಸರು ಕ್ರಮ ತೆಗೆದು ಕೊಂಡಿದ್ದರು. ಆದರೆ ತನಿಖೆಯಿಂದ ಆಹಾರದಿಂದ ಸಾವು ಸಂಭವಿಸಿಲ್ಲ ಎಂದು ದೃಢ ಪಟ್ಟಿದೆ.

Leave a Reply

Your email address will not be published. Required fields are marked *

error: Content is protected !!