May 14, 2026

ಡಾಬಾದ ಫ್ರಿಡ್ಜ್‌ನೊಳಗೆ ಬಾಲಕಿಯ ಮೃತದೇಹ ಪತ್ತೆ: ಆರೋಪಿ ಪೊಲೀಸರ ವಶಕ್ಕೆ
 

0
IMG-20230101-WA00441.jpg

ನವದೆಹಲಿ: ಸಂಬಂಧ ಮುರಿದುಕೊಂಡು ಬೇರೆ ಮದುವೆಯಾಗಲೆತ್ನಿಸಿದನ್ನು ಪ್ರಶ್ನಿಸಿದ ಬಾಲಕಿಯನ್ನು ಪ್ರೇಮಿಯೊಬ್ಬ ಕತ್ತು ಹಿಸುಕಿ ಕೊಲೆಗೈದು ಡಾಬಾದ ರೆಫ್ರಿಜರೇಟರ್‌ನಲ್ಲಿಟ್ಟ ಘಟನೆ ದೆಹಲಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ದೆಹಲಿಯ ಉತ್ತಮ್‌ನಗರದ ಡಾಬಾದಲ್ಲಿರಿಸಲಾಗಿದ್ದ ರೆಫ್ರಿಜರೇಟರ್‌ನಲ್ಲಿ ಬಾಲಕಿ ಮೃತದೇಹ ಪತ್ತೆಯಾಗಿದ್ದು, ಆರೋಪಿ ಸಾಹಿಲ್ ಗೆಹ್ಲೋಟ್ (26)ನನ್ನು ಬಂಧಿಸಲಾಗಿದೆ. ಸಾಹಿಲ್ ಮತ್ತು ಬಾಲಕಿ ಕಳೆದೈದು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಆದರೆ ಇತ್ತೀಚೆಗೆ ಆರೋಪಿ ಸಾಹಿಲ್ ಈ ಸಂಬಂಧವನ್ನು ಮುರಿದುಕೊಂಡು ಬೇರೆ ಹುಡುಗಿಯನ್ನು ಮದುವೆಯಾಗಲು ಇಚ್ಚಿಸಿದ್ದ. ಇದನ್ನು ಬಾಲಕಿ ವಿರೋಧಿಸಿದಕ್ಕೆ ಕಾರಿನಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ತಾನು ನಡೆಸುತ್ತಿರುವ ಡಾಬಾದ ಫ್ರಿಡ್ಜ್‌ನಲ್ಲಿ ಇರಿಸಿದ್ದ ಎಂದು ವರದಿಯಾಗಿದೆ.

ಡಾಬಾದಲ್ಲಿ ಬಾಲಕಿಯ ಶವ ಇರುವ ಮಾಹಿತಿ ಪೊಲೀಸರಿಗೆ ಲಭಿಸಿದ ಮೇರೆಗೆ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿ ಘಟನೆ ಬಗ್ಗೆ ಬಾಯ್ಬಿಟ್ಟಿದ್ದಾನೆ. ಕಾಶ್ಮೀರ ಗೇಟ್ ಐಎಸ್ಬಿಟಿ ಬಳಿ ಆತ ಕಾರಿನೊಳಗೆ ಆಕೆಯನ್ನು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿ 10ರಂದು ಆರೋಪಿಯ ಮದುವೆ ನಿಶ್ಚಯವಾಗಿತ್ತು. ಇದಕ್ಕೂ ಒಂದೆರಡು ದಿನಗಳ ಮುಂಚೆ ಆತ ಆಕೆಯನ್ನು ಕೊಲೆಗೈದಿದ್ದಾನೆ. ಬಳಿಕ 10ರಂದು ಬೇರೆ ಹುಡುಗಿಯೊಂದಿಗೆ ಮದುವೆ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.

ದೆಹಲಿಯ ಶ್ರದ್ದಾ ವಾಕರ್‍ ಕೊಲೆ ಪ್ರಕರಣದ ಮಾದರಿಯಲ್ಲೇ ಈ ಪ್ರಕರಣವೂ ನಡೆದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!