August 13, 2026

ಧಾರ್ಮಿಕ ಅವಹೇಳನ ಪ್ರಕರಣ: ಲೇಖಕರಾದ ಕೆ.ಎಸ್‌.ಭಗವಾನ್ ಮತ್ತು ಇತರರು ಆರೋಪ ಮುಕ್ತ

0
bhagwan-2_647_092315085342.jpg

ಮೈಸೂರು: ಲೇಖಕರಾದ ಕೆ.ಎಸ್‌.ಭಗವಾನ್, ಮಹೇಶ್‌ ಚಂದ್ರಗುರು ಹಾಗೂ ಅರವಿಂದ ಮಾಲಗತ್ತಿ ವಿರುದ್ಧ 2016ರಲ್ಲಿ ಜಯಲಕ್ಷ್ಮಿಪುರಂ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಬುಧವಾರ ವಜಾಗೊಳಿಸಿರುವ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಅವರನ್ನು ಆರೋಪ ಮುಕ್ತಗೊಳಿಸಿದೆ.

ಮಾನಸ ಗಂಗೋತ್ರಿ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಧಾರ್ಮಿಕ ಅವಹೇಳನ ಮಾಡಿದ್ದಾರೆ ಎಂದು ಮೂವರನ್ನು ಆರೋಪಿಗಳನ್ನಾಗಿಸಿ ಅಲ್ಲಿನ ಅಧ್ಯಾಪಕರು ದೂರು ನೀಡಿದ್ದರು. ಕಕ್ಷಿದಾರರ ವಿರುದ್ಧ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ಕೋರ್ಟ್ ಆರೋಪ ಮುಕ್ತಗೊಳಿಸಿದೆ ಎಂದು ಭಗವಾನ್‌ ಪರ ವಕಾಲತ್ತು ವಹಿಸಿದ್ದ ವಕೀಲ ಅಪ್ಪಾಜಿಗೌಡ ತಿಳಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!