‘ತಂದೆಯನ್ನು ಕೊಂದು ನನ್ನನ್ನು ನೋಡಿ ನಗುತ್ತಿದ್ದರು’:
ಕಾಶ್ಮೀರದ ಬಾಲಕಿಯ ವೀಡಿಯೊ ವೈರಲ್
ಜಮ್ಮು & ಕಾಶ್ಮೀರ: “ತಂದೆಯನ್ನು ಕೊಂದು ನನ್ನನ್ನು ನೋಡಿ ನಗುತ್ತಿದ್ದರು” ಎಂದು ಬಾಲಕಿ ವಿಡಿಯೊದಲ್ಲಿ ಬಿಕ್ಕಳಿಸುತ್ತಾ ಹೇಳಿದ್ದಾರೆ.
13 ವರ್ಷದ ಕಾಶ್ಮೀರಿ ಬಾಲಕಿಯೊಬ್ಬರು ಜಮ್ಮು ಕಾಶ್ಮೀರದಲ್ಲಿ ಸೋಮವಾರ ನಡೆದ ಭದ್ರತಾ ಕಾರ್ಯಾಚರಣೆ ವೇಳೆ ಹತ್ಯೆಗೀಡಾದ ತನ್ನ ತಂದೆಯ ಬಗ್ಗೆ ಮಾತನಾಡುತ್ತಾ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೀಗ, ಅಲ್ತಾಫ್ ಭಟ್ ಅವರ 13 ವರ್ಷದ ಮಗಳು ನೀಡಿರುವ ಹೇಳಿಕೆಯ ವಿಡಿಯೊ ವ್ಯಾಪಕವಾಗಿ ವೈರಲ್ ಆಗಿದೆ. ಅದರಲ್ಲಿ ಬಾಲಕಿಯು ಕಣ್ಣೀರಿಡುತ್ತಾ ಅಂದಿನ ಘಟನೆಯನ್ನು ವಿವರಿಸಿದ್ದಾರೆ.
“ನನ್ನ ಚಿಕ್ಕಪ್ಪ 10 ಗಂಟೆಯ ಸುಮಾರಿಗೆ ಫೋನ್ ಮಾಡಿ, ಅಳಲು ಪ್ರಾರಂಭಿಸಿದರು. ಆಗ ನಾನು ಮನೆಯಲ್ಲಿದ್ದೆ, ಈ ವೇಳೆ ನಾನು ಕೂಗು ಮತ್ತು ಕಿರುಚಾಟದ ಶಬ್ದಗಳನ್ನು ಕೇಳಿದೆ. ನಾನು ಓಡಿಹೋದೆ, ನಾನು ಅಲ್ಲಾನನ್ನು ಪ್ರಾರ್ಥಿಸುತ್ತಿದ್ದೆ” ಎಂದು ಅವರು ಅಳುತ್ತಾ ಹೇಳುತ್ತಾರೆ.
ಶ್ರೀನಗರದ ವಾಣಿಜ್ಯ ಸಂಕೀರ್ಣದಲ್ಲಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಈ ವೇಳೆ ಮೃತಪಟ್ಟವರಲ್ಲಿ ಬಾಲಕಿಯ ತಂದೆ ಉದ್ಯಮಿ ಮೊಹಮ್ಮದ್ ಅಲ್ತಾಫ್ ಭಟ್ ಕೂಡಾ ಸೇರಿದ್ದಾರೆ. ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ಮತ್ತು ಅವನ ಸಹಚರನನ್ನು ಪಡೆಗಳು ಕೊಂದಿದ್ದಾರೆ ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.





