July 6, 2026

ಕಾರು ಢಿಕ್ಕಿಯಾಗಿ ಇಬ್ಬರು ಮೃತ್ಯು: ಶಾಸಕನ ಸಂಬಂಧಿಯ ಬಂಧನ

0
image_editor_output_image548607682-1675750898754.jpg

ಬೆಂಗಳೂರು: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಶಾಸಕ ಹರತಾಳು ಹಾಲಪ್ಪ ಅವರ ಸಂಬಂಧಿಯ ಕಾರಿನ ಚಾಲಕ ಸರಣಿ ಅಪಘಾತ ಎಸಗಿದ್ದಾನೆ

ದುರ್ಘ‌ಟನೆಯಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಹಲಸೂರು ಗೇಟ್‌ ಸಂಚಾರ ಠಾಣೆವ್ಯಾಪ್ತಿಯ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮುಂಭಾಗ ಸೋಮವಾರ ನಡೆದಿದೆ.

ಎಚ್‌ಬಿಆರ್‌ ಲೇಔಟ್‌ ನಿವಾಸಿ, ವಾಹನಗಳ ಬಿಡಿ ಭಾಗಗಳ ಮಾರಾಟಗಾರ ಮಜೀದ್‌ ಖಾನ್‌ (36) ಮತ್ತು ಕೆ.ಜಿ.ಹಳ್ಳಿ ನಿವಾಸಿ, ಪಾರ್ಕಿಂಗ್‌ ಸ್ಥಳದ ನಿರ್ವಾಹಕ ಅಯ್ಯಪ್ಪ(60) ಮೃತರು ಎಂದು ಗುರುತಿಸಲಾಗಿದೆ.

ಕೃತ್ಯ ಎಸಗಿದ ಕಾರು ಚಾಲಕ ಯಲ ಹಂಕ ನ್ಯೂಟೌನ್‌ ನಿವಾಸಿ ಮೋಹನ್‌ (48) ಎಂಬಾತನನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!