December 16, 2025

ದಕ್ಷಿಣ ಟರ್ಕಿಯ ನೂರ್ಡಗಿ ನಗರದಲ್ಲಿ 7.8 ತೀವ್ರತೆಯ ಭೂಕಂಪ: 100ಕ್ಕೂ ಅಧಿಕ ಮಂದಿ ಸಾವು

0
image_editor_output_image-229003353-1675663532884.jpg

ಇಸ್ತಾಂಬುಲ್: ದಕ್ಷಿಣ ಟರ್ಕಿಯ ಗಾಜಿಯಾಂಟೆಪ್‌ನಲ್ಲಿರುವ ನೂರ್ಡಗಿ ನಗರದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದು,ಹಲವು ಕಟ್ಟಡಗಳು ನೆಲಕ್ಕುರುಳಿದಿರುವ ಕುರಿತು ವರದಿಯಾಗಿದೆ.

ಸೋಮವಾರ ಮುಂಜಾನೆ ಪ್ರಬಲ ಭೂಕಂಪ ಉಂಟಾಗಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸಮೀಕ್ಷೆಯ ಪ್ರಕಾರ ಆರಂಭದಲ್ಲಿ ಭೂಕಂಪವು ಗಾಜಿಯಾಂಟೆಪ್ ಪ್ರಾಂತ್ಯದ ನೂರ್ಡಗಿ ನಗರದಿಂದ 26 ಕಿಮೀ ಪೂರ್ವಕ್ಕೆ 17.9 ಕಿಮೀ ಆಳದಲ್ಲಿ ಸಂಭವಿಸಿದ್ದು, ಆ ಬಳಿಕ 6.7 ರ ತೀವ್ರತೆಯ ಪ್ರಮಾಣದಲ್ಲಿ ಮಧ್ಯ ಟರ್ಕಿಯಲ್ಲಿ 9.9 ಕಿಮೀ ಆಳದಲ್ಲಿ ಕಂಪನ ಉಂಟಾಗಿದೆ ಎಂದು ಹೇಳಿದೆ.

ಭೂಕಂಪದಿಂದ 100 ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಅನೇಕರು ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!