ಜಾತಿಗಳನ್ನು ಸೃಷ್ಟಿಸಿದ್ದು ಪುರೋಹಿತರು, ದೇವರಲ್ಲ: RSS ಮುಖಂಡ ಮೋಹನ್ ಭಾಗವತ್
ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಜಾತೀಯತೆ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಈ ದೇಶದಲ್ಲಿ ಅಭಿಪ್ರಾಯಗಳು ಬೇರೆ ಇರಬಹುದು. ಆದರೆ ಸಾಕ್ಷ್ಯಪ್ರಜ್ಞೆ ಒಂದೇ ಎಂದವರು ಹೇಳಿದ್ದಾರೆ. ಸಂತ ಶಿರೋಮಣಿ ರೋಹಿದಾಸ್ ಅವರ 647ನೇ ಜನ್ಮೋತ್ಸವದ ಅಂಗವಾಗಿ ಮುಂಬೈನ ರವೀಂದ್ರ ನಾಟ್ಯ ಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಭಾಗವತ್, ಜಾತಿ ವ್ಯವಸ್ಥೆ ಭಾರತೀಯ ಸಮಾಜಕ್ಕೆ ಮಾರಕವಾಗಿದೆ ಎಂದಿದ್ದಾರೆ.
ನಮ್ಮ ಸೃಷ್ಟಿಕರ್ತನಿಗೆ ನಾವೆಲ್ಲರೂ ಸಮಾನರು. ಯಾವುದೇ ಜಾತಿ, ಪಂಥ, ಮತಗಳನ್ನು ಆತ ಸೃಷ್ಟಿಸಲಿಲ್ಲ. ಈ ವೈರುದ್ಧ್ಯಗಳನ್ನು ಸೃಷ್ಟಿಸಿದ್ದು ಪುರೋಹಿತರು. ಇದು ತಪ್ಪು ಎಂದು ಆರೆಸ್ಸೆಸ್ ಸರಸಂಘಚಾಲಕರು ಹೇಳಿದ್ದಾರೆ.





