December 16, 2025

ಚೂರಿ ಹಿಡಿದು ಜನಬಿಡ ಪ್ರದೇಶಕ್ಕೆ ಬಂದಿದ್ದ ವ್ಯಕ್ತಿಯನ್ನು ಗುಂಡು ಹಾರಿಸಿ ಬಂಧಿಸಿದ ಪೊಲೀಸರು

0
image_editor_output_image-206264261-1675658205624.jpg

ಕಲಬುರಗಿ: ಚೂರಿ ಹಿಡಿದ ಜನಬಿಡ ಪ್ರದೇಶಕ್ಕೆ ಬಂದ ವ್ಯಕ್ತಿಯೊಬ್ಬ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಈ ಬಗ್ಗೆ ಮಾಹಿತಿ ತಿಳಿದ ಚೌಕ್ ಠಾಣೆ ಪೊಲೀಸರು ಸಾರ್ವಜನಿಕರ ರಕ್ಷಣೆಗಾಗಿ ಆರೋಪಿ ಮೇಲೆ ಗುಂಡು ಹಾರಿಸಿದ್ದಾರೆ. ಗಂಡೇಟು ತಿಂದ ಆರೋಪಿ ಅಬ್ದುಲ್ ಜಾಫರ್ ನನ್ನ ಪೊಲೀಸರು ಜೈಲಿಗಟ್ಟಿಲಿದ್ದಾರೆ.

ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಗೆ ರಾತ್ರಿ 8 ಗಂಟೆ ಸುಮಾರಿಗೆ ಚಾಕು ಹಿಡಿದು ಬಂದ ಅಬ್ದುಲ್ ಜಾಫರ್ ಎಂಬಾತ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ ನಡೆಸಿ ಭೀತಿ ಹುಟ್ಟಿಸಿದ್ದ. ಈತನ ಹುಚ್ಚಾಟಕ್ಕೆ ಬೆಚ್ಚಿಬಿದ್ದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದರು.

Leave a Reply

Your email address will not be published. Required fields are marked *

error: Content is protected !!