March 20, 2026

ವಾಣಿ ಜಯರಾಮ್ ಸಾವು ಆಕಸ್ಮಿಕವಲ್ಲ, ಕೊಲೆ?: ಅನುಮಾನ ಮೂಡಿಸಿದ ಗಾಯಗಳು: ಪೊಲೀಸರಿಂದ ತನಿಖೆ

0
IMG-20230205-WA0030.jpg

ಮುಂಬೈ: ಹಿರಿಯ ಚಲನಚಿತ್ರ ಗಾಯಕಿ ವಾಣಿ ಜಯರಾಮ್ ಫೆಬ್ರವರಿ 4 ರಂದು ನಿಧನರಾಗಿದ್ದು, ಚನ್ನೈನ ಮನೆಯಲ್ಲಿ ಕೆಳಗೆ ಬಿದ್ದಿದ್ದ ಅವರ ಮೃತದೇಹ ಕಂಡು ಸಾವಿನ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಶನಿವಾರದಂದು ಬೆಳಗ್ಗೆ ಕೆಲಸದಾಕೆ ಬಂದು ಕಾಲಿಂಗ್ ಬೆಲ್ ಮಾಡಿದರೂ ಬಾಗಿಲು ತೆಗೆಯದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಮರಣೋತ್ತರ ಪರೀಕ್ಷೆಯಲ್ಲೂ ವಾಣಿ ಜಯರಾಮ್ ಅವರ ಹಣೆ ಮತ್ತು ಮುಖದ ಮೇಲೆ ಗಾಯಗಳಿರುವುದು ದೃಢಪಟ್ಟಿದದ್ದು, ಪೊಲೀಸರು ಅನುಮಾನಾಸ್ಪದ ಸಾವು ಎಂದು ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ.

ಇನ್ನು ವಾಣಿ ಜಯರಾಮ್ ಅವರ ಮನೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಜ್ಞರನ್ನು ಮನೆಗೆ ಕಳುಹಿಸಿದ್ದಾರೆ.

ವಾಣಿ ಜಯರಾಂ ಅವರ ಸಂಪೂರ್ಣ ಮರಣೋತ್ತರ ಪರೀಕ್ಷೆ ವರದಿ ಬಂದರೂ ಸಾವಿಗೆ ಕಾರಣ ಹೇಳಲು ಸಾಧ್ಯವಿಲ್ಲ ಎಂದು ವಿಧಿವಿಜ್ಞಾನ ತಜ್ಞರು ಕೂಡ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!