August 13, 2026

ಮಂಗಳೂರು: ಮೊಬೈಲ್ ಬಳಸುವಾಗ ತಾಯಿ ಗದರಿದಕ್ಕೆ ಬಾಲಕ ಆತ್ಮಹತ್ಯೆ

0
IMG-20230131-WA0011.jpg

ಮಂಗಳೂರು: ಕಂಕನಾಡಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪದವು ಬಿ ಗ್ರಾಮದ ಕೋಟಿಮುರ ಎಂಬಲ್ಲಿ ಮೊಬೈಲ್ ಬಳಸಿಕ್ಕೆ ತಾಯಿ ಗದರಿದರೆಂದು ಬೇಸರಗೊಂಡ ಒಂಭತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಜ್ಞಾನೇಶ್ (14) ಆತ್ಮಹತ್ಯೆ ಮಾಡಿಕೊಂಡ ಬಾಲಕ.

ಬಾಲಕನು ಹೆಚ್ಚು ಮೊಬೈಲ್ ಬಳಸುವ ವಿಚಾರವಾಗಿ ಮನೆಯಲ್ಲಿ ತಾಯಿ ಸ್ವಲ್ಪ ಗದರಿಸಿದ್ದು, ಇದರಿಂದ ಬೇಸರಗೊಂಡು ನಾನು ಸ್ನಾನ ಮಾಡಿ ಬರುವುದಾಗಿ ಹೇಳಿ ರೂಮಿನೊಳಗೆ ಹೋದವನು ಬಾರದಿದ್ದಾಗ ತಂದೆ ಜಗದೀಶ್ ಬಾತ್ರೂಮ್ ಬಳಿಯಿರುವ ಕಿಟಕಿಯ ಮೂಲಕ ರೂಮಿನೊಳಗೆ ಹೋಗಿ ನೋಡಿದಾಗ ಬಾಲಕ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ.

ಇನ್ನು ತಕ್ಷಣ ನೇಣು ಬಿಗಿದ ಶಾಲನ್ನು ಕತ್ತರಿಸಿ ಕೆಳಗೆ ಇಳಿಸಿ ನೋಡಿದಾಗ ಬಾಲಕ ಮೃತಪಟ್ಟಿರುವುದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!