ನೇರಳಕಟ್ಟೆ: ನೇತಾಜಿ ಗೆಳೆಯರ ಬಳಗದ ವತಿಯಿಂದ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾಟ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಬಂಟ್ವಾಳ : ನೇರಳಕಟ್ಟೆ ನೇತಾಜಿ ನಗರದ ನೇತಾಜಿ ಗೆಳೆಯರ ಬಳಗದ ವತಿಯಿಂದ ಸ್ವಾಮಿ ವಿವೇಕಾನಂದ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ ಪ್ರಯುಕ್ತ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಾಟ, ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನೇತಾಜಿ ಕ್ರೀಡಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ
ಡಾ. ಎಂ.ಕೆ.ಪ್ರಸಾದ್ ಮಾತನಾಡಿ ಸ್ವಾಮಿ ವಿವೇಕಾನಂದ ಮತ್ತು ನೇತಾಜಿಯವರ ಆದರ್ಶವನ್ನು ಮೈಗೂಡಿಸಿಕೊಂಡು ರಾಜ್ಯಾವಾರು, ಪ್ರಾಂತಾವಾರು ಭಾಷಾವಾರು ಹಾಗೂ ಜಾತಿವಾರು ಭಿನ್ನಾಭಿಪ್ರಾಯ ಗಳನ್ನು ಬದಿಗಿಟ್ಟು ರಾಷ್ರದ ಅಭಿವೃದ್ಧಿಗೆ ಕೈ ಜೋಡಿಸೋಣ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಂದಾಗೋಣ ಎಂದು ಕರೆ ನೀಡಿದರು.
ನೇರಳಕಟ್ಟೆ ಸಿ.ಎ.ಬೇಂಕ್ ಅಧ್ಯಕ್ಷ ಪುಷ್ಪರಾಜ್ ಚೌಟ ಅದ್ಯಕ್ಷತೆ ವಹಿಸಿದ್ದರು.
ನೇರಳಕಟ್ಟೆ ಸಿ.ಎ.ಬೇಂಕ್ ಉಪಾಧ್ಯಕ್ಷ ಡಿ. ತನಿಯಪ್ಪ ಗೌಡ, ಅನಂತಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸನತ್ ಕುಮಾರ್ ರೈ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಕೀಲಾ ಕೃಷ್ಣ ಪೂಜಾರಿ, ಸದಸ್ಯರಾದ ಅಶೋಕ್ ರೈ, ಧನುಂಜಯ ಗೌಡ, ಲತೀಫ್ ನೇರಳಕಟ್ಟೆ, ರೈಲ್ವೇ ಟಿಕೆಟ್ ನಿರೀಕ್ಷಕ ವಿಠಲ ನಾಯ್ಕ, ರೈಲ್ವೇ ಇಲಾಖೆಯ ತಿವಾರಿ, ಶಿಕ್ಷಣ ಇಲಾಖೆಯ ಹರ್ಷೇಂದ್ರ ಶೆಟ್ಟಿ,ಡಾ. ಮನೋಹರ್ ರೈ ಅಂತರಗುತ್ತು, ಡಾ. ಗಣರಾಜ್ ಎಲ್ಕಾಣ, ನಿವೃತ್ತ ಮುಖ್ಯ ಶಿಕ್ಷಕ ರಾಮಚಂದ್ರ ಮಾಸ್ಟರ್, ಬೇಬಿ ನಾಯ್ಕ ಬಿಎಸ್ಸೆನ್ನೆಲ್, ನೇರಳಕಟ್ಟೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಅಧ್ಯಕ್ಷ ವಾಮನ ಕುಲಾಲ್, ಸುರತ್ಕಲ್ ಎನ್ಐಟಿಕೆ ಪ್ರೊಫೆಸರ್ ದಿನೇಶ್, ಕೆನರಾ ಇಂಜಿನಿಯರಿಂಗ್ ಕಾಲೇಜು ಪ್ರೊಫೆಸರ್ ಡಾ. ನಿರಂಜನ್ ರೈ, ಕಲಾವಿದ ಚಂದ್ರಹಾಸ ಶೆಟ್ಟಿ ಕರಿಂಕ, ನಿವೃತ್ತ ಸೈನಿಕ ನಿತೀಶ್ ಕುಮಾರ್ ಪಂತಡ್ಕ, ಹಿರಿಯ ಕಬಡ್ಡಿ ಆಟಗಾರ ಮಜೀದ್ ಮಾಣಿ, ಉದ್ಯಮಿಗಳಾದ ಸಂಜೀವ ಶೆಟ್ಟಿ ಕಲ್ಪಾಡಿಗದ್ದೆ, ಸಂಜೀವ ಶೆಟ್ಟಿ ತಂಗಳಪಾಲು, ಸಂಜೀವ ಪೂಜಾರಿ ಪಂತಡ್ಕ, ಹರೀಶ್ ಮೂಲ್ಯ ಅಲಂಗಾಜೆ, ಲೋಕೇಶ್ ಮೂಲ್ಯ ಪಂತಡ್ಡ, ಕೇಶವ ಗೌಡ ಕೂಡೋಲು, ಮಿಥುನ್ ಶೆಟ್ಟಿ ಕೊಡಂಗೆಮಾರು, ವಿಶು ಕುಮಾರ್ ಗಣೇಶ ನಗರ, ಶೀತಲ್ ಗಣೇಶ ನಗರ, ಚರಣ್ ರೈ ಕುರ್ಲೆತ್ತಿಮಾರ್, ಅರುಣ್ ದಾಸ್ ಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ. ಎಂ.ಕೆ. ಪ್ರಸಾದ್ ಭಂಡಾರಿ, ನಾಟಿ ವೈದ್ಯ ಗಂಗಾಧರ ಪಂಡಿತ್ ಗೋಳಿಕಟ್ಟೆ, ಶಿಕ್ಷಕಿ ಸುಲೋಚನಾ ರೈ ಅವರನ್ನು ಸನ್ಮಾನಿಸಲಾಯಿತು, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಹಬೀಬ್ ಮಾಣಿ, ದೀಪಕ್ ಪೆರಾಜೆ, ಹಾರಿಸ್ ಕಲ್ಪನೆ, ಸಿದ್ದೀಕ್ ಕುಕ್ಕಾಜೆ, ಮನೋಹರ್ ಕೆದಿಲ, ಅಶ್ರಫ್ ಕುಕ್ಕಾಜೆ, ಕಬಡ್ಡಿ ಪಂದ್ಯಾಟ ಹಾಗೂ ಅನೂಪ್ ಪುತ್ತೂರು, ಸಚಿನ್ ಕಾಸರಗೋಡು ವಾಲಿಬಾಲ್ ಪಂದ್ಯಾಟದ ತೀರ್ಪುಗಾರರಾಗಿ ಸಹಕರಿಸಿದರು.
ನೇತಾಜಿ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ನಾಯ್ಕ ಸ್ವಾಗತಿಸಿ, ಕಾರ್ಯದರ್ಶಿ ರವಿರಾಜ್ ನಾಯ್ಕ ವಂದಿಸಿದರು. ಗೋಪಾಲಕೃಷ್ಣ ಮಾಸ್ಟರ್, ಸಂದೇಶ್ ಉಪ್ಪಿನಂಗಡಿ ಮತ್ತು ಸಮ್ರಾಝ್ ನೇರಳಕಟ್ಟೆ ವಿವಿಧ ಕಾರ್ಯಕ್ರಮ ನಿರೂಪಿಸಿದರು.
ಕುಕ್ಕಾಜೆ ತಂಡಕ್ಕೆ ಕಬಡ್ಡಿ, ಗಣೇಶ ನಗರ ತಂಡಕ್ಕೆ ವಾಲಿಬಾಲ್ ಪ್ರಶಸ್ತಿ: 16 ತಂಡಗಳು ಭಾಗವಹಿಸಿದ್ದ ಪುರುಷರ 60 ಕೆ.ಜಿ. ವಿಭಾಗದ ಪ್ರೋ ಮಾದರಿ ಕಬಡ್ಡಿ ಪಂದ್ಯಾಟದಲ್ಲಿ ಫ್ರೆಂಡ್ಸ್ ಕುಕ್ಕಾಜೆ ಪ್ರಥಮ, ಸೆವೆನ್ ಸ್ಟಾರ್ ಕಲ್ಪನೆ ದ್ವಿತೀಯ, ಆದಿಶಕ್ತಿ ಮಿತ್ತೂರು ತೃತೀಯ ಹಾಗೂ ಬಿ.ಕೆ.ಬ್ರದರ್ಸ್ ಸಾಲ್ಮರ ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಕುಕ್ಕಾಜೆ ತಂಡದ ರಾಝಿಕ್, ಇರ್ಶಾದ್ ಮತ್ತು ಕಲ್ಪನೆ ತಂಡದ ನಝೀರ್ ವೈಯಕ್ತಿಕ ಪ್ರಶಸ್ತಿ ಗಳನ್ನು ತಮ್ಮದಾಗಿಸಿಕೊಂಡರು.
18 ತಂಡಗಳು ಭಾಗವಹಿಸಿದ್ದ ವಾಲಿಬಾಲ್ ಪಂದ್ಯಾಟದಲ್ಲಿ ತತ್ವಮಸಿ ಗಣೇಶ ನಗರ ಪ್ರಥಮ, ಸಿ.ಎಫ್.ಸಿ ಒಕ್ಕೆತ್ತೂರು ದ್ವಿತೀಯ, ನೇತಾಜಿ ಗೆಳೆಯರ ಬಳಗ ನೇರಳಕಟ್ಟೆ ತೃತೀಯ ಹಾಗೂ ನೆಹರು ಯುವಕ ಮಂಡಲ ಪದವು ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಗಣೇಶ ನಗರ ತಂಡದ ಉಸ್ಸಾಮ್ ರಹಮತ್, ಅರ್ಶದ್ ಮತ್ತು ಒಕ್ಕೆತ್ತೂರು ತಂಡದ ರಜತ್ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.