ವಿಟ್ಲ: ಫೆ.9 ರಿಂದ 12 ವರೆಗೆ ಕಂಬಳಬೆಟ್ಟು ದರ್ಗಾ ಶರೀಫ್ ಮಖಾಂ ಉರೂಸ್
ವಿಟ್ಲ: ಫೆ.9 ರಿಂದ 12 ವರೆಗೆ ಕಂಬಳಬೆಟ್ಟು ಮಖಾಂ ಉರೂಸ್
ವಿಟ್ಲ: ಕಂಬಳಬೆಟ್ಟು ವಹಿಯುಲ್ಲಾಹಿ ಮಶ್‌ಹೂರ್ (ಖ.ಸಿ) ದರ್ಗಾ ಶರೀಫ್ ಇದರ ಉರೂಸ್ ಸಮಾರಂಭವು ಫೆಬ್ರವರಿ 9 ರಿಂದ 12ರವರೆಗೆ ನಡೆಯಲಿದೆ.
ಕಂಬಳಬೆಟ್ಟು ಸಾದಾತ್ ನಗರದಲ್ಲಿ ಪುರಾತನ ಕಾಲದಿಂದ ಹಲವಾರು ಕರಾಮತ್ ಗಳೊಂದಿಗೆ ಕೀರ್ತಿಶೇಷರಾಗಿ ಅಂತ್ಯ ವಿಶ್ರಮ ಹೊಂದುತ್ತಿರುವ ಬಹು ವಹಿಯುಲ್ಲಾಹಿ (ಖ.ಸಿ) ರವರ ಹೆಸರಿನಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮವು ಫೆಬ್ರವರಿ 9, 10, 11, 12 ರಂದು ನಡೆಯಲಿದೆ.
ಫೆಬ್ರವರಿ 9ರಂದು ಸ್ವಲಾತ್ ವಾರ್ಷಿಕ ಹಾಗೂ ದ್ಸಿಕ್ರ್ ಮಜ್ಲಿಸ್ ನಡೆಯಲಿದ್ದು ಇದರ ನೇತೃತ್ವವನ್ನು ಬಹು. ಅಸ್ಸಯ್ಯದ್ ಸುಹೈಲ್ ಅಸ್ಸಖಾಫ್ ಸಖಾಫಿ ಮಡಕ್ಕರ ತಂಙಳ್ ಕಣ್ಣೂರು, ಕೇರಳ ವಹಿಸಲಿದ್ದಾರೆ ಅಲ್ಲದೆ ಪ್ರವಾದಿ ಪ್ರೇಮ ಹಾಗೂ ಸ್ವಲಾತಿನ ಮಹತ್ವದ ಬಗ್ಗೆ ಪ್ರಭಾಷಣ ಮಾಡಲಿದ್ದಾರೆ. ಬಹು.ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಅವರು ಉದ್ಘಾಟನೆ ಮಾಡಲಿದ್ದು, ಬಹು. ಅಲ್ ಹಾಜ್ ಜಿ. ಇಬ್ರಾಹಿಂ ಮದನಿ ಮುದರ್‍ರಿಸ್ ಕಂಬಳಬೆಟ್ಟು ಅವರು ಅಧ್ಯಕ್ಷತೆ ವಹಿಸಲಿರುವರು.
ಫೆಬ್ರವರಿ 10 ರಂದು ಬಹು. ಅಲ್ ಹಾಜ್ ಅಸ್ಸಯ್ಯದ್ ಪೂಕೋಯ ತಂಙಳ್ ಪುತ್ತೂರು ಅವರು ದುಆ ನೇತೃತ್ವವನ್ನುನೀಡಲಿದ್ದು, ಬಹು. ಅಲ್ ಹಾಜ್ ಮುನೀರ್ ಬಾಖವಿ ಮಟ್ಟತ್ತೂರು ಮಲಪ್ಪುರಂ ಕೇರಳ ಅವರು ಇಸ್ಲಾಮಿನಲ್ಲಿ ಕೌಟುಂಬಿಕ ಜೀವನದ ಕುರಿತಾಗಿ ಪ್ರಭಾಷಣ ಮಾಡಲಿದ್ದಾರೆ.
ಇನ್ನು ಫೆಬ್ರವರಿ 11ರಂದು ಬಹು. ಅಲ್ ಹಾಜ್ ಅಸ್ಸಯ್ಯದ್ ಪೂಕುಂಞ ತಂಙಳ್ ಉದ್ಯಾವರ ಅವರು ದುಆ ನೇತೃತ್ವವನ್ನುನೀಡಲಿದ್ದು, ಬಹು. ಅಲ್ ಹಾಜ್ ಕೆ.ಟಿ ತ್ವಾಹಿರ್ ಸಖಾಫಿ ಮಂಜೇರಿ ಕೇರಳ ಅವರು ಪ್ರೀತಿಯ ಪ್ರವಾದಿ ಮಹಶರಾದಲ್ಲಿ ಎಂಬ ವಿಷಯದ ಕುರಿತು ಪ್ರಭಾಷಣ ಮಾಡಲಿದ್ದಾರೆ.
ಫೆಬ್ರವರಿ 12ರಂದು ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಬಹು. ಅಲ್ ಹಾಜ್ ಅಸ್ಸಯ್ಯದ್ ಕೆ.ಎಸ್ ಅಟ್ಟಕ್ಕೋಯ ತಂಙಳ್ ಕುಂಬೋಳ್ ಅಧ್ಯಕ್ಷತೆ ವಹಿಸಲಿದ್ದು, ಬಹು. ಅಲ್ ಹಾಜ್ ಜಿ. ಇಬ್ರಾಹಿಂ ಮದನಿ ಮುದರ್‍ರಿಸ್ ಕಂಬಳಬೆಟ್ಟು ಅವರು ಉದ್ಘಾಟನೆ ಮಾಡಲಿದ್ದು, ಬಹು. ಅಬ್ದುಲ್ ರಶೀದ್ ಸಖಾಫಿ ಏಲಂಕುಳಂ ಕೇರಳ ಅವರು ಮುಸ್ಲಿಮನ ವಿಶ್ವಾಸ ಹಾಗೂ ಜೀವನಶೈಲಿಯ ಬಗ್ಗೆ ಪ್ರಭಾಷಣ ಮಾಡಲಿದ್ದಾರೆ.




