ಮಹಿಳೆಯ ಪಾದವನ್ನು ಕತ್ತರಿಸಿ ಬೆಳ್ಳಿಯ ಕಾಲುಗೆಜ್ಜೆಯನ್ನು ಕದ್ದೊಯ್ದಿರುವ ದರೋಡೆಕೋರರು
ನವದೆಹಲಿ: ರಾಜಸ್ಥಾನದ ರಾಜ್ ಸಮಂಡ್ ಜಿಲ್ಲೆಯ ಹೊಲದ ಸಮೀಪ ಪತ್ತೆಯಾದ 45 ವರ್ಷದ ಮಹಿಳೆಯ ಶವದ ಪಾದವನ್ನು ಕತ್ತರಿಸಿ ಬೆಳ್ಳಿಯ ಕಾಲುಗೆಜ್ಜೆಯನ್ನು ಕದ್ದೊಯ್ದಿರುವ ಘಟನೆ ಚಾರ್ ರ್ಭುಜ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಘಟನೆ ವೇಳೆ ದರೋಡೆಕೋರರು ಮಹಿಳೆಯ ಪಾದವನ್ನು ಕತ್ತರಿಸಿ ಬೆಳ್ಳಿಗೆಜ್ಜೆಯನ್ನು ತೆಗೆದುಕೊಂಡು ಹೋಗಿದ್ದು, ನಂತರ ಆರೋಪಿಗಳು ಆಕೆಯ ಕುತ್ತಿಗೆಯನ್ನು ಕಡಿದು ಪರಾರಿಯಾಗಿದ್ದರು. ಮೃತ ಮಹಿಳೆಯನ್ನು ಕಂಕುಬಾಯಿ ಎಂದು ಗುರುತಿಸಲಾಗಿದೆ.
ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಗಂಡನಿಗೆ ತಿಂಡಿಯನ್ನು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು. ಸಂಜೆ ಕಂಕುಬಾಯಿ ಗಂಡ ಮನೆಗೆ ಬಂದು, ಮಕ್ಕಳ ಬಳಿ ತಾಯಿಯ ಬಗ್ಗೆ ವಿಚಾರಿಸಿದಾಗ, ಬೆಳಗ್ಗೆಯೇ ಹೊಲಕ್ಕೆ ತಿಂಡಿ ತೆಗೆದುಕೊಂಡು ಹೋಗಿರುವುದಾಗಿ ತಿಳಿಸಿದ್ದರು





