ಮನೈರ್ ನದಿಯಲ್ಲಿ ಈಜಲು ತೆರಳಿದ್ದ ಆರು ವಿದ್ಯಾರ್ಥಿಗಳು ನೀರುಪಾಲು
ಹೈದರಾಬಾದ್: ತೆಲಂಗಾಣದ ರಾಜಣ್ಣ–ಸಿರ್ಸಿಲ್ಲಾ ಜಿಲ್ಲೆಯ ಮನೈರ್ ನದಿಯಲ್ಲಿ ಈಜಲು ತೆರಳಿದ್ದ ಆರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಸಿರ್ಸಿಲ್ಲಾ ನಗರದ ಹೊರವಲಯದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಹುಡುಗರ ಗುಂಪೊಂದು ನದಿಯ ಆಳವನ್ನು ಆರಿಯದೇ ನೀರಿಗೆ ಧುಮುಕಿದ್ದರು. ಐವರ ಮೃತದೇಹ ಪತ್ತೆಯಾಗಿದ್ದು, ಒಬ್ಬರಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.





