February 3, 2026

ಕಲ್ಲಗುಡ್ಡೆ ಮದ್ರಸದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ

0
IMG-20230127-WA0000.jpg

ಪುತ್ತೂರು: ಕಲ್ಲಗುಡ್ಡೆ ಹಿದಾಯತುಲ್ ಇಸ್ಲಾಂ ಮದ್ರಸದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮವು ನಡೆಯಿತು.

ಕಮಿಟಿ ಅಧ್ಯಕ್ಷರಾದ ರಶೀದ್ ಹಾಜಿ ನೈತಾಡಿ ಯವರು ಧ್ವಜಾರೋಹಣ ನೆರೆವೇರಿಸಿದರು. ಮದ್ರಸ ಅಧ್ಯಾಪಕರಾದ ಯೂಸುಫ್ ಶಾಹೀರ್ ಯಮಾನಿ ಪೋಳ್ಯ ರವರು ಪ್ರಾಸ್ತಾವಿಕ ಭಾಷಣ ಮಾಡಿ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯ ಕೋರಿ ದುಆ ನೆರವೇರಿಸಿದರು.

ಮದ್ರಸ ಮಕ್ಕಳ ಸಂಘಟನೆಯಾದ SKSBV ಅಧ್ಯಕ್ಷರಾದ ಸಾಬಿತ್ ಕಲ್ಲಗುಡ್ಡೆ ಹಾಗೂ ಕಾರ್ಯದರ್ಶಿಯಾದ ಇಸ್ಪಾಕ್ ನೈತಾಡಿ ಸಂದೇಶ ಭಾಷಣ ಮಾಡಿದರು. ಸದಸ್ಯ ರುಮೈಝ್ ಕಲ್ಲಗುಡ್ಡೆ ಪ್ರತಿಜ್ಞೆಗೈದು, ನೆರೆದಿದ್ದ ಎಲ್ಲರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮದ್ರಸ ಕಮಿಟಿ ಕಾರ್ಯದರ್ಶಿ ಆಬಿದ್ M.K, ಕೋಶಾದಿಕಾರಿ ಸುಲೈಮಾನ್ S.K, ಸದಸ್ಯರಾದ ಅಬ್ದುಲ್ಲಾ T.K, ರಫೀಕ್ ಸಿಝ್ಲರ್, ಮಜೀದ್ ಕಲ್ಲಗುಡ್ಡೆ, ರಶೀದ್ ಕಲ್ಲಗುಡ್ಡೆ, ಶರೀಫ್ ಕಲ್ಲಗುಡ್ಡೆ ಹಾಗೂ ಊರಿನ ನಾಗರಿಕರು ಮತ್ತು ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನೆರೆದಿದ್ದ ಎಲ್ಲರನ್ನೂ SKSBV ಕನ್ವೀನರ್ ಸಫ್ರೀದ್ ಕಲ್ಲಗುಡ್ಡೆ ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!