ನನ್ನ ಮೃತದೇಹವನ್ನು ಹಿಂದು ಸಂಸ್ಕೃತಿಯಂತೆ ಸುಡಬೇಕು:
ಶಿಯಾ ಸೆಂಟ್ರಲ್ ವಕ್ಸ್ ಮಂಡಳಿಯ ಮಾಜಿ ಅಧ್ಯಕ್ಷ ವಸೀಮ್ ರಿಝ್ವಿ
ಉತ್ತರ ಪ್ರದೇಶ: ನನ್ನನ್ನು ಹಿಂದು ಸಂಸ್ಕೃತಿಯಂತೆ ಸುಡಬೇಕು, ಸಮಾಧಿ ಮಾಡಬಾರದು ಎಂದು ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಸ್ ಮಂಡಳಿಯ ಮಾಜಿ ಅಧ್ಯಕ್ಷ ವಸೀಮ್ ರಿಝ್ವಿ ಹೊಸ ವಿವಾದ ಸೃಷ್ಟಿಸಿದ್ದಾರೆ.
ಈ ಬಗ್ಗೆ ವೀಡಿಯೋ ರೆಕಾರ್ಡ್ ಮಾಡಿ ಸಂದೇಶವನ್ನು ಬಿಡುಗಡೆ ಮಾಡಿದ್ದು, ಹಿಂದೂ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ಮಾಡಬೇಕೆ ಹೊರತು ಸಮಾಧಿ ಮಾಡಬಾರದು ಎಂಬ ಬಯಕೆ ವ್ಯಕ್ತಪಡಿಸಿದ್ದಾರೆ.
ನನ್ನ ದೇಹವನ್ನು ತನ್ನ ಹಿಂದೂ ಸ್ನೇಹಿತ, ದಾಸನಾ ದೇವಸ್ಥಾನದ ಮಹಂತ್ ನರಸಿಂಹ ನಂದ ಸರಸ್ವತಿಗೆ ಹಸ್ತಾಂತರಿಸಬೇಕು. ಅವರು ನನ್ನ ಚಿತೆಗೆ ಬೆಂಕಿ ಹಚ್ಚಬೇಕು ಎಂದು ರಿಝ್ವಿ ಉಲ್ಲೇಖಿಸಿದ್ದಾರೆ.





