August 15, 2026

ಪತ್ನಿಗೆ ಪ್ರತಿ ತಿಂಗಳು 50 ಸಾವಿರ ರೂ. ಜೀವನಾಂಶ ನೀಡುವಂತೆ ಮೊಹಮ್ಮದ್ ಶಮಿಗೆ ಕೋರ್ಟ್ ಆದೇಶ

0
image_editor_output_image100106670-1674528898415.jpg

ನವದೆಹಲಿ: ಟೀಂ ಇಂಡಿಯಾ ವೇಗಿ ಮೊಹಮದ್‌ ಶಮಿ ವೈಯಕ್ತಿಕ ಜೀವನದ ವಿಚಾರವಾಗಿ ದೊಡ್ಡ ಸುದ್ದಿ ಹೊರಬಿದ್ದಿದೆ.

ಕೋಲ್ಕತ್ತಾ ಕೋರ್ಟ್ ಭಾರತದ ವೇಗದ ಬೌಲರ್‌ಗೆ ಮಾಸಿಕ ಐವತ್ತು ಸಾವಿರ ರೂಪಾಯಿಗಳ ಜೀವನಾಂಶವನ್ನು ತನ್ನಿಂದ ದೂರ ವಾಸ ಮಾಡುತ್ತಿರುವ ಪತ್ನಿ ಹಸಿನ್ ಜಹಾನ್‌ಗೆ ನೀಡುವಂತೆ ಆದೇಶಿಸಿದೆ.

ಅಲಿಪೋರ್ ನ್ಯಾಯಾಲಯದ ನ್ಯಾಯಾಧೀಶೆ ಅನಿಂದಿತಾ ಗಂಗೂಲಿ ಈ ಪ್ರಕರಣದ ತೀರ್ಪು ಪ್ರಕಟಿಸಿದರು. ಆದರೆ, ಹಸಿನ್ ಜಹಾನ್‌ಗೆ ಈ ಮೊತ್ತದಿಂದ ಸಂತಸವಾಗಿಲ್ಲ. ಹಸಿನ್‌ ಜಹಾನ್‌ ತಿಂಗಳಿಗೆ 10 ಲಕ್ಷ ರೂಪಾಯಿ ಜೀವನಾಂಶದ ಬೇಡಿಕೆ ಇಟ್ಟಿದ್ದರು.

2018 ರಲ್ಲಿ, ಹಸಿನ್ ಜಹಾನ್ ಅವರು ಮಾಸಿಕ 10 ಲಕ್ಷ ರೂಪಾಯಿ ಜೀವನಾಂಶವನ್ನು ಕೋರಿ ಕಾನೂನು ಅರ್ಜಿ ಸಲ್ಲಿಸಿದರು.

ಅರ್ಜಿಯಲ್ಲಿ ಹಸಿನ್ ಜಹಾನ್ ಅವರು ವೈಯಕ್ತಿಕ ವೆಚ್ಚಕ್ಕಾಗಿ 7 ಲಕ್ಷ ರೂಪಾಯಿ ಮತ್ತು ಮಗಳ ಪೋಷಣೆಗಾಗಿ ತಿಂಗಳಿಗೆ 3 ಲಕ್ಷ ರೂಪಾಯಿ ಜೀವನಾಂಶವನ್ನು ಬಯಸಿದ್ದರು. ಈ ತೀರ್ಪಿನ ವಿರುದ್ಧ ಹಸಿನ್ ಜಹಾನ್ ಈಗ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

You may have missed

error: Content is protected !!