February 2, 2026

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಅಥಿಯಾ ಶೆಟ್ಟಿ, ಕ್ರಿಕೆಟಿಗ ಕೆ.ಎಲ್ ರಾಹುಲ್ 

0
image_editor_output_image-342982639-1674502153894.jpg

ಬಾಂಬೆ: ಬಾಲಿವುಡ್‌ನ ಲವ್ ಬರ್ಡ್ಸ್ ಅಥಿಯಾ ಶೆಟ್ಟಿ ಮತ್ತು ಕೆ.ಎಲ್ ರಾಹುಲ್ ಸೋಮವಾರ (ಜ.23)ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಸಾಕಷ್ಟು ವರ್ಷಗಳು ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಈ ಚೆಂದದ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತು ಹೀರೋ ಸಿನಿಮಾದ ನಟಿ ಅಥಿಯಾ ಶೆಟ್ಟಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸೋಮವಾರ(ಜ.23)ರಂದು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದೆ. ಸುನೀಲ್ ಶೆಟ್ಟಿ ಅವರ ಬಂಗಲೆಯಲ್ಲಿ ಮದುವೆ ನೆರವೇರಿದೆ. ಈ ಸಂಭ್ರಮಕ್ಕೆ ಇಡೀ ಬಾಲಿವುಡ್ ಚಿತ್ರರಂಗವೇ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *

error: Content is protected !!