March 26, 2026

ಈಜು ಬಾರದೆ ನದಿಯ ನೀರಿನಲ್ಲಿ ಮುಳುಗಿ ಯುವಕ ಸಾವು

0
image_editor_output_image-2126797619-1674288942417.jpg

ಹಾವೇರಿ : ವರದಾ ನದಿಯಲ್ಲಿ ತಾಡಪತ್ರೆಗಳನ್ನು ತೊಳೆಯಲು ಹೋದ ಯುವಕ ಈಜು ಬಾರದೆ ನದಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಸೂರ ಗ್ರಾಮದ ಬಳಿ ಇರುವ ವರದಾ ನದಿಯಲ್ಲಿ ನಡೆದಿದೆ.

ಮೃತ ಯುವಕನನ್ನು ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ಟಿಪ್ಪುಸುಲ್ತಾನ್‌ ಮೇಡ್ಲೇರಿ (23) ಎಂದು ಗುರುತಿಸಲಾಗಿದೆ.

ಯುವಕ ಟಿಪ್ಪುಸುಲ್ತಾನ್ ತಾಡಪತ್ರೆಗಳನ್ನು ತೊಳೆಯಲು ವರದಾ ನದಿಯ ಕಳಸೂರ ಗ್ರಾಮದ ಬಳಿ ಇರುಬ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ತೆರಳಿದ್ದ.

ನದಿಯ ನೀರಿನಲ್ಲಿ ತಾಡಪತ್ರೆ ತೊಳೆಯುತ್ತಿದ್ದ ವೇಳೆ ಪಕ್ಕದಲ್ಲಿದ್ದ ಬಕೆಟ್ ನದಿಯಲ್ಲಿ ತೇಲಿ ಹೋಗುತ್ತಿದ್ದನ್ನು ಕಂಡು, ಅದನ್ನು ಹಿಡಿಯಲು ಹೋಗಿದ್ದಾನೆ.

ಆದರೆ ಈಜು ಬಾರದೆ ನದಿಯ‌ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

Leave a Reply

Your email address will not be published. Required fields are marked *

error: Content is protected !!