ಉಡುಪಿ: ಬೈಕ್‌ಗೆ ಹಿಂಬದಿಯಿಂದ ಟಿಪ್ಪರ್ ಢಿಕ್ಕಿ: ಸವಾರ ಮೃತ್ಯು
ಉಡುಪಿ: ನಿಟ್ಟೂರು ಬಳಿ ಬೈಕ್‌ಗೆ ಹಿಂಬದಿಯಿಂದ ಟಿಪ್ಪರ್ ಢಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಮೃತಪಟ್ಟವರನ್ನು ಅಂಬಾಗಿಲು ನಿವಾಸಿ ಅಬ್ದುಲ್ ರಶೀದ್ (60) ಎಂದು ಗುರುತಿಸಲಾಗಿದೆ.
ಸಮೋಸಾ ವ್ಯಾಪಾರಿಯಾಗಿದ್ದ ಇವರು ಕೆಲಸ ಮುಗಿಸಿಕೊಂಡು ಕರಾವಳಿ ಬೈಪಾಸ್ ಮಾರ್ಗವಾಗಿ ಅಂಬಾಗಿಲಿನ ತನ್ನ ಮನೆಗೆ ತೆರಳುತ್ತಿದ್ದರು. ಮಣಿಪಾಲ ಇನ್ ಹೊಟೇಲ್ ಬಳಿ ತಲುಪುತ್ತಿದ್ದಂತೆ ಹಿಂಬದಿಯಿಂದ ಅತೀ ವೇಗದಲ್ಲಿ ಆಗಮಿಸಿದ ಟಿಪ್ಪರ್ ಚಾಲಕ ಬೈಕ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ.
ಇನ್ನು ಢಿಕ್ಕಿಯ ರಭಸಕ್ಕೆ ಅಬ್ದುಲ್ ರಶೀದ್ ಅವರು ಹಾಕಿದ್ದ ಹೆಲ್ಮೆಟ್ ಕೂಡ ನಜ್ಜುಗುಜ್ಜಾಗಿದೆ.
ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




