March 28, 2026

ಬಂಟ್ವಾಳ: ನೇತ್ರಾವತಿ ಆಟೋ ಚಾಲಕ ಮತ್ತು ಮಾಲಕರ ಸಭೆ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

0
IMG-20230119-WA0034.jpg

ಬಂಟ್ವಾಳ: ನೇತ್ರಾವತಿ ಆಟೋ ಚಾಲಕ ಮತ್ತು ಮಾಲಕರ ಸಭೆ ಇಂದು ಮಂಗಿಲಪದವು ನ್ಯಾಷನಲ್ ಯುವಕ ಮಂಡಲ ಇದರ ಸಭಾಂಗಣದಲ್ಲಿ ನಡೆದಿದೆ.

ರಿಕ್ಷಾ ಚಾಲಕ ಮಾಲಕರ ಸಭೆಯಲ್ಲಿ ಎಲ್ಲರ ಒಮ್ಮತದಿಂದ ಸಂಘಟನೆಗೆ ನೇತ್ರಾವತಿ ಎಂಬ ಹೆಸರನ್ನಿಡುವ ಮೂಲಕ ಅಧ್ಯಕ್ಷ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.

ರಿಕ್ಷಾ ಚಾಲಕ ಮಾಲಕರ ಗೌರವ ಅಧ್ಯಕ್ಷರಾಗಿ ಕೃಷ್ಣಪ್ಪ ಪುಜಾರಿ ಕಲ್ಲಡ್ಕ, ಸಂಚಾಲಕರಾಗಿ ಅಬ್ದುಲ್ ರಹ್ಮಾನ್ ನೆಲ್ಲಿಗುಡ್ಡೆ, ಅಧ್ಯಕ್ಷರಾಗಿ ಅಶೋಕ್ ಪೂಜಾರಿ, ಉಪಾಧ್ಯಕ್ಷರಾಗಿ ಇಸ್ಮಾಯಿಲ್ (ಇಚ್ಚಲಿ ಮಂಗಿಲಪದವು.ಪ್ರಾನ್ಸಿಸ್ ಡಿಕುನ್ಹ ಕೆದುಮೂಲೆ), ಕಾರ್ಯದರ್ಶಿಯಾಗಿ ಶಸಿಧರ ಕೋಚೋಡಿ, ಉಪಕಾರ್ಯದರ್ಶಿಯಾಗಿ ಶಾಕೀರ್ ಇರುಂದೂರ್, ಕೋಶಾಧಿಕಾರಿ ಬಶೀರ್ ಕೆದುಮೂಲೆ, ಸಂಘಟನಾ ಕಾರ್ಯದರ್ಶಿಗಲಾಗಿ ಇಸಾಕ್ ರೆಡ್ಬೋಯಿಸ್, ರಘುನಾಥ್ ಮಾಡ ಇವರನ್ನು ಅಯ್ಕೆ ಮಾಡಲಾಯಿತು.

ಸಭೆಯನ್ನು ಉದ್ದೇಶಿಸಿ ಕೃಷ್ಣಪ್ಪ ಪುಜಾರಿ ಮತ್ತು ಅಬ್ದುಲ್ ರಹ್ಮಾನ್ ನೆಲ್ಲಿಗುಡ್ಡೆ ರಘು ಪೂಜಾರಿ ಮಾತನಾಡಿದರು. ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಶಿಲಾ ನಿರ್ಮಲಾ ವೇಗಸ್ ಪಂಚಾಯತ್ ಸದಸ್ಯರಾದ ಅಬ್ದುಲ್ ರಹ್ಮಾನ್ ಸಾಹಿಬ್. ಲಲಿತಾ ನಾಯಕ್ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!