August 13, 2026

ಪ್ರೇಮ ವೈಫಲ್ಯದಿಂದ ಅಪ್ರಾಪ್ತೆ ಆತ್ಮಹತ್ಯೆ ಪ್ರಕರಣ: ನಾಪತ್ತೆಯಾಗಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ನಿತೇಶ್ ಅರೆಸ್ಟ್

0
20230117_201648.jpg

ಚಿಕ್ಕಮಗಳೂರು: ಜಿಲ್ಲೆಯ ಕಳಸದಲ್ಲಿ ಅಪ್ರಾಪ್ತ ವಯಸ್ಕ ಹುಡುಗಿ ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಹಿಂದೂ ಸಂಘಟನೆಯ ಕಾರ್ಯಕರ್ತ ನಿತೇಶ್ ನನ್ನು ಪೊಲೀಸರು ಮಂಗಳವಾರ ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಆರೋಪಿ ನಿತೇಶ್ ಮತ್ತು 17 ವರ್ಷದ ಹುಡುಗಿ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಪ್ರೇಮಿಗಳ ನಡುವೆ ಜಗಳವಾದ ಕಾರಣ ಹುಡುಗಿ ಜನವರಿ 10ರಂದು ವಿಷ ಸೇವನೆ ಮಾಡಿದ್ದಳು. ಜನವರಿ 14ರಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.

ಅಪ್ರಾಪ್ತೆ ಆತ್ಮಹತ್ಯೆಗೆ ಪ್ರಚೋದನೆ: ಬಿಜೆಪಿ ಕಾರ್ಯಕರ್ತನ ಬಂಧನಕ್ಕೆ ಪೊಲೀಸರ ಹಿಂದೇಟು
ಯುವತಿ ಸಾಯುವ ಮುನ್ನ ಆಸ್ಪತ್ರೆ ಬೆಡ್ ಮೇಲೆ ಸಾವಿಗೆ ಕಾರಣ ಬರೆದಿದ್ದಳು. ಅದರಲ್ಲಿ ತನ್ನ ಪ್ರೇಮಿ ನಿತೇಶ್ ಕುರಿತಾಗಿ ಬರೆದಿದ್ದಳು. ಈ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನಿತೇಶ್ ನಾಪತ್ತೆಯಾಗಿದ್ದ. ಇದೀಗ ಕುದುರೆಮುಖ ಪೊಲೀಸರು ಆರೋಪಿ ಸೆರೆ ಹಿಡಿದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!