ಬಾಗಲೂರು ಗ್ರಾಮಪಂಚಾಯತ್ ನ ದಲಿತ ಅಧ್ಯಕ್ಷೆ ಕುಳಿತ ಕುರ್ಚಿ ಗೋಮೂತ್ರದಿಂದ ಶುದ್ಧೀಕರಣ:
ಬಿಜೆಪಿ ಎಸ್ಸಿ ಮೋರ್ಚಾ ಆರೋಪ
ಬ್ಯಾಟರಾಯನಪುರ: ದಲಿತ ಮಹಿಳೆ ಕುಳಿತಿದ್ದ ಕುರ್ಚಿಯನ್ನು, ಗೋಮೂತ್ರದಿಂದ ಶುದ್ಧೀಕರಿಸಿ ನಂತರ ಬಳಸಿರುವ ಘಟನೆ ಇಲ್ಲಿನ ಬಾಗಲೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.
ದಲಿತ ಮಹಿಳೆ ಅಧ್ಯಕ್ಷರಾಗಿ ಕುಳಿತ್ತಿದ್ದ ಕುರ್ಚಿಯನ್ನು ಅವರು ಅಧಿಕಾರದಿಂದ ಕೆಳಗಿಳಿದ ಬಳಿಕ ಸವರ್ಣಿಯ ವ್ಯಕ್ತಿ ಗೋಮೂತ್ರದಿಂದ ಶುದ್ಧೀಕರಿಸಿದ್ದಾನೆ ಎಂದು ಬಿಜೆಪಿ ಎಸ್‌ಸಿ ಮೊರ್ಚಾ ಆರೋಪಿಸಿದೆ. ಈ ಕುರಿತು ಮೊರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.





