September 20, 2024

ಮ್ಯಾನ್ಮಾರ್: ಆಂಗ್ ಸಾನ್ ಸೂಕಿ ವಿರುದ್ಧ ಚುನಾವಣಾ ವಂಚನೆ ಆರೋಪ

0

ಯಾಂಗೂನ್: 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಕ್ರಮ ಎಸಗಿರುವುದಾಗಿ ಆರೋಪ ಹೊರಿಸಿ ಮ್ಯಾನ್ಮಾರ್ ನಾಯಕಿ ಆನ್ ಸಾನ್ ಸೂಕಿ ಸರ್ಕಾರವನ್ನು ಕಿತ್ತೊಗೆದ ಸೇನೆ, ಅವರ ಆರೋಪ ಸಾಬೀತಾಗಿರುವುದಾಗಿ ತನ್ನ ಅಧೀನದಲ್ಲಿರುವ ಸುದ್ದಿ ವಾಹಿನಿ ಮೂಲಕ ಸುದ್ದಿ ಬಿತ್ತರಿಸಿದೆ.

ಕಳೆದ ವರ್ಷ ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ನಾಯಕಿ ಆನ್ ಸಾನ್ ಸೂಕಿ ಅವರು ಭರ್ಜರಿ ಜಯ ದಾಖಲಿಸಿದ್ದರು. ಮತ್ತೆ ದೇಶದ ಅಧ್ಯಕ್ಷೆ ಸ್ಥಾನಕ್ಕೆ ಅವರು ಏರಲಿದ್ದರು.

ಅದಕ್ಕೂ ಮೊದಲೇ ಸೇನೆ ಚುನಾವಣೆಯಲ್ಲಿ ಸೂಕಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಚುನಾವಣಾ ಫಲಿತಾಂಶವನ್ನು ಅಸಿಂಧುಗೊಳಿಸಿತು. ನಂತರ ಸೂಕಿ ಸೇರಿದಂತೆ ಅನೇಕ ರಾಜಕೀಯ ಮುಖಂಡರನ್ನು ಬಂಧಿಸಿ ದೇಶದಲ್ಲಿ ಸೇನಾಡಳಿತ ಹೇರಲಾಗಿತ್ತು.

ಜನರು ಸೇನಾಡಳಿತ ವಿರೋಧಿಸಿ, ಸೂಕಿಯವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಭೀಕರ ಪ್ರತಿಭಟನೆ ನಡೆಸಿದ್ದರು. ಸೂಕಿ ವಿರುದ್ಧದ ನ್ಯಾಯಾಲಯ ವಿಚಾರಣೆ ನಡೆಯುತ್ತಿತ್ತು. ಇದೀಗ 76 ವರ್ಷದ ಸೂಕಿ ಅವರು ಚುನಾವಣೆ ಅಕ್ರಮ ಎಸಗಿದ್ದು ಸಾಬೀತಾಗಿದೆ ಎನ್ನುವ ಸುದ್ದಿ ಹೊರಬಿದ್ದಿದೆ.

ಶಿಕ್ಷಾ ಪ್ರಮಾಣದ ಕುರಿತು ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಮುಂದಿನ ನ್ಯಾಯಾಲಯ ವಿಚಾರಣೆಯಲ್ಲಿ ಅದು ತಿಳಿದುಬರಲಿದೆ ಎನ್ನಲಾಗುತ್ತಿದೆ.

76 ವರ್ಷ ವಯಸ್ಸಿನ ಸೂ ಕಿ ಅವರು ವಾಕಿ ಟಾಕಿಗಳನ್ನು ಅಕ್ರಮವಾಗಿ ಆಮದು ಮಾಡಿಕೊಳ್ಳುವುದು, ದೇಶದ್ರೋಹ ಮತ್ತು ಭ್ರಷ್ಟಾಚಾರ ಸೇರಿದಂತೆ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾರೆ ಮತ್ತು ತಪ್ಪಿತಸ್ಥರಾದರೆ ದಶಕಗಳ ಕಾಲ ಜೈಲು ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

Leave a Reply

Your email address will not be published. Required fields are marked *

error: Content is protected !!