December 20, 2025

ತಮ್ಮ ಜನ್ಮದಿನದ ಕಾರ್ಯಕ್ರಮದಲ್ಲೇ ಕುಸಿದು ಬಿದ್ದು ಮೃತಪಟ್ಟ ಬಳೋಬಾಳ ಮಠದ ಶ್ರೀ ಸಂಗನಬಸವ ಸ್ವಾಮೀಜಿ

0
image_editor_output_image-944230722-1637054932179.jpg

ಬೆಳಗಾವಿ: ಗೋಕಾಕ ತಾಲೂಕಿನ ಬಳೋಬಾಳ ಗ್ರಾಮದ ಸ್ವಾಮಿಗಳು ತಮ್ಮ ಜನ್ಮದಿನದಂದು ಪ್ರವಚನ ಮಾಡುತ್ತಿರುವಾಗಲೇ ವೇದಿಕೆ ಮೇಲೆ‌ ಕುಸಿದು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ನವೆಂಬರ್ 6ರಂದು ಈ ಘಟನೆ ನಡೆದಿದ್ದು, ಅದರ ವಿಡಿಯೋ ಈಗ ವೈರಲ್ ಆಗುತ್ತಿದೆ.

ಬಳೋಬಾಳ ಗ್ರಾಮದ‌ ಬಸವಯೋಗ ಮಂಟಪ ಟ್ರಸ್ಟ್ ನ ಬಳೋಬಾಳ ಮಠದ ಶ್ರೀ ಸಂಗನಬಸವ ಸ್ವಾಮೀಜಿ (53) ಲಿಂಗೈಕ್ಯರಾಗಿದ್ದಾರೆ.

ಶ್ರೀಗಳು ತಮ್ಮ ಜನ್ಮದಿನದಂದು ಪ್ರವಚನ ಮಾಡುತ್ತಿದ್ದಾಗಲೇ ತೀವ್ರ ಹೃದಯಾಘಾತದಿಂದ ಅವರು ವೇದಿಕೆಯ ಮೇಲೆ ನಿಧನರಾಗಿದ್ದಾರೆ. ನವೆಂಬರ್ 6 ರಂದು ಆಶೀರ್ವಚನ ನೀಡುತ್ತಿರುವಾಗ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭಕ್ತರೊಬ್ಬರ ಮೊಬೈಲ್ ನಲ್ಲಿ ಈ ದೃಶ್ಯ ಸೆರೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

Leave a Reply

Your email address will not be published. Required fields are marked *

You may have missed

error: Content is protected !!