February 3, 2026

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಆಸ್ಪತ್ರೆಗೆ ದಾಖಲು

0
1141258-untitled-design-83.jpeg

ಲಂಡನ್: ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಕೊರೊನಾ ವೈರಸ್ ತಗುಲಿದ ಹಿನ್ನೆಲೆಯಲ್ಲಿ ಶ್ವಾಸಕೋಶ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಕೃತಕ ಉಸಿರಾಟದ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.

ಲಲಿತ್ ಮೋದಿಗೆ ವಾರದಲ್ಲಿ ಎರಡು ಬಾರಿ ಕೋವಿಡ್ ಸೋಂಕು ತಗುಲಿದ್ದು, ಇದರ ಬೆನ್ನಲ್ಲೇ ನ್ಯೂಮೆನಿಯಾ ಕಾಣಿಸಿಕೊಂಡಿದೆ. ಇದರಿಂದ ಅವರ ಶ್ವಾಸಕೋಶದ ಮೇಲೆ ಸಮಸ್ಯೆ ಆಗಿದೆ ಎಂದು ಹೇಳಲಾಗಿದೆ.

ಪ್ರಸ್ತುತ ಲಂಡನ್ ನಲ್ಲಿ ತಂಗಿರುವ ಲಲಿತ್ ಮೋದಿಗೆ ಎರಡು ವಾರದಿಂದ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಏರ್ ಲಿಫ್ಟ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಅವರ ಇನ್ ಸ್ಟಾಗ್ರಾಂ ಪೋಸ್ಟ್ ನಲ್ಲಿ ವಿವರಿಸಲಾಗಿದೆ.

ಭಾರತದಿಂದ ಪರಾರಿಯಾಗಿರುವ ಲಲಿತ್ ಮೋದಿ ಸದ್ಯ ಲಂಡನ್ ನಲ್ಲಿ ನೆಲೆಸಿದ್ದಾರೆ. ಮೆಕ್ಸಿಕೊದಲ್ಲಿ ಅವರು ಕೋವಿಡ್ ಗೆ ತುತ್ತಾಗಿದ್ದು, ಅಲ್ಲಿಂದ ಲಂಡನ್ ಗೆ ಏರ್ ಆಯಂಬುಲೆನ್ಸ್ ನ ಮೂಲಕ ಲಂಡನ್ ಗೆ ತಲುಪಿದ್ದಾರೆ.

Leave a Reply

Your email address will not be published. Required fields are marked *

error: Content is protected !!