February 3, 2026

ಪೆರ್ಲ: ಆಫ್ರಿಕನ್ ಹಂದಿ ಜ್ವರ ಪತ್ತೆ ಹಿನ್ನೆಲೆ: ಫಾರ್ಮ್ ಹಂದಿಗಳ ಹತ್ಯೆ

0
WhatsApp-Image-2023-01-14-at-1.12.09-PM-750x372.jpeg

ಪೆರ್ಲ: ಕಾಟುಕುಕ್ಕೆಯಲ್ಲಿ ಆಫ್ರಿಕನ್ ಹಂದಿ ಜ್ವರ ದೃಢ ಪಟ್ಟ ಹಿನ್ನೆಲೆಯಲ್ಲಿ ಫಾರ್ಮ್‌ ಹಂದಿಗಳನ್ನು ಕೊಲ್ಲಲಾಗುತ್ತಿದೆ.

ಎಣ್ಮಕಜೆ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಾಟುಕುಕ್ಕೆಯ ಬಾಳೆಮೂಲೆ ಎಂಬಲ್ಲಿ ಕೆಲ ದಿನಗಳ ಹಿಂದಷ್ಟೇ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ರೋಗ ಹರಡದಂತೆ ತಡೆಯಲು ಮತ್ತು ರೋಗಬಾಧಿತ ಹಂದಿಗಳು ಆಹಾರ ರೂಪದಲ್ಲಿ ಮನುಷ್ಯನ ದೇಹ ಸೇರದಂತೆ ಜಾಗೃತಿ ವಹಿಸುವ ಸಲುವಾಗಿ ಫಾರ್ಮ್ ಹಂದಿಗಳನ್ನು ಕೊಲ್ಲಲು ಕ್ರಮ ಕೈಗೊಳ್ಳಲಾಗಿದೆ.

ಫಾರ್ಮ್ ಹಂದಿಗಳನ್ನು ನಾಶಪಡಿಸಿ ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಲಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾ ಮೃಗ ಸಂರಕ್ಷಣ ಇಲಾಖೆಯ ನೌಕರರು, ಪಶು ವೈದ್ಯರನ್ನೊಳಗೊಂಡ ಕ್ಷಿಪ್ರ ಕಾರ್ಯಾಚರಣೆ ತಂಡವು ಕಾರ್ಯೋನ್ಮುಖವಾಗಿವೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!