February 3, 2026

ವಿಟ್ಲ: ಮೂರು ವಿದ್ಯುತ್ ಕಂಬಗಳಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿ

0
IMG-20230114-WA0090

ವಿಟ್ಲ: ಅಪರಿಚಿತ ವಾಹನಯೊಂದು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ಶನಿವಾರ ಬೆಳಗ್ಗಿನ ಜಾವ ವಿಟ್ಲ-ಮಂಗಳೂರು ರಸ್ತೆಯ ಕೆಲಿಂಜ ಪಾತ್ರತೋಟ ಎಂಬಲ್ಲಿ ಸಂಭವಿಸಿದೆ.
ವಿಟ್ಲ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಅಪರಿಚಿತ ವಾಹನ ರಸ್ತೆ ಬದಿಯಲ್ಲಿರುವ ಮೂರು ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದಿದೆನ್ನಲಾಗಿದೆ. ಘಟನೆಯಿಂದ ಮೂರು ವಿದ್ಯುತ್ ಕಂಬಗಳು ನೆಲಕ್ಕುರುಳಿದೆ. ಕಲ್ಲು, ಮಣ್ಣು ಸಾಗಾಟ ಲಾರಿ ಆಗಿರಬಹುದೆಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ. ಇದರಿಂದ ಸುಮಾರು ಅಂದಾಜು 70 ಸಾವಿರ ರೂ.ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಮೆಸ್ಕಾಂ ಶಾಖಾಧಿಕಾರಿ ಸತೀಶ್ ಅವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!