April 3, 2026

ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ

0
wor7cv78zumpmku1_1673453204.jpeg

ಆಂದ್ರಪ್ರದೇಶ: ಆಂಧ್ರದ ವಿಶಾಖಪಟ್ಟಣಂನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಕೋಚ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಜನವರಿ 19 ರಂದು ಪ್ರಧಾನಿ ನರೇಂದ್ರ ಮೋದಿಯವರು ಈ ರೈಲಿಗೆ ಉದ್ಘಾಟನೆ ಮಾಡಬೇಕಿತ್ತು. ಅದಾಗಲೇ ಇಂತಹ ಅಪಾಯಕಾರಿ ಘಟನೆ ನಡೆದಿದೆ.

ಇತ್ತ ಈ ಕೃತ್ಯವೆಸಗಿದವರ ದುಷ್ಕರ್ಮಿಗಳನ್ನು ಹಿಡಿಯಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಟ್ರಯಲ್ ರನ್ ಮುಗಿದ ನಂತರ ವಂದೇ ಭಾರತ್ ರೈಲು ವಿಶಾಖಪಟ್ಟಣಂ ರೈಲು ನಿಲ್ದಾಣದಿಂದ ಮರ್ರಿಪಾಲೆಂನ ಕೋಚ್ ನಿರ್ವಹಣಾ ಕೇಂದ್ರಕ್ಕೆ ಹೋಗುತ್ತಿದ್ದಾಗ ನಿರ್ವಹಣಾ ಪ್ರಕ್ರಿಯೆಯಲ್ಲಿ ಕಲ್ಲು ತೂರಾಟ ನಡೆದಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ತಿಳಿಸಿದ್ದಾರೆ.

ಸಿಕಂದರಾಬಾದ್ ರೈಲು ನಿಲ್ದಾಣದಿಂದ ಪ್ರಧಾನಿ ಮೋದಿ ಅವರು ರೈಲಿಗೆ ಫ್ಲ್ಯಾಗ್ ಆಫ್ ಮಾಡಲು ನಿರ್ಧರಿಸಿದ್ದರು. ಇದು ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ನಡುವೆ ಸರಿಸುಮಾರು ಎಂಟು ಗಂಟೆಗಳಲ್ಲಿ ಕಾರ್ಯನಿರ್ವಹಿಸಲು ನಿರ್ಧರಿಸಲಾಗಿತ್ತು. ರೈಲಿಗೆ ಕಲ್ಪಿಸಲಾದ ಮಧ್ಯಂತರ ನಿಲುಗಡೆಗಳಲ್ಲಿ ವಾರಂಗಲ್, ಖಮ್ಮಂ, ವಿಜಯವಾಡ ಮತ್ತು ರಾಜಮಂಡ್ರಿ ಸೇರಿವೆ.

Leave a Reply

Your email address will not be published. Required fields are marked *

error: Content is protected !!