ಮಂಚಿ-ಕೊಳ್ನಾಡು: ಗೌಸಿಯಾ ಅಸೋಸಿಯೇಶನ್ ನೇತೃತ್ವದಲ್ಲಿ SIR ಅರ್ಜಿ ಭರ್ತಿ ಕಾರ್ಯ: ಕಳೆದ 15 ದಿನಗಳಿಂದ ಯಶಸ್ವಿಯಾಗಿ ಸೇವೆ ನೀಡುತ್ತಿರುವ ಸದಸ್ಯರು
ಮಂಚಿ ಕೊಳ್ನಾಡು. ಇಲ್ಲಿನ ಪ್ರತಿಷ್ಠಿತ ಸಂಸ್ಥೆಯಾದ ಗೌಸಿಯಾ ಅಸೋಸಿಯೇಷನ್ ರಿ ಮಂಚಿ ಕೊಳ್ನಾಡು ಇದರ ಕಛೇರಿ ಯಲ್ಲಿ ಕಳೆದ ಜುಲೈ ತಿಂಗಳ 2 ನೇ ತಾರೀಕು ಆರಂಭವಾದ SIR ನಮೂನೆ ಭರ್ತಿ ಮಾಡುವ ಕಾರ್ಯ ಜುಲೈ 15 ನೇ ತಾರೀಕು ವರೆಗೆ ಯಶಸ್ವಿಯಾಗಿ ಮುಂದುವರಿಯುತ್ತಿದ್ದು ಸ್ಥಳೀಯರು ಉಚಿತವಾಗಿ ಈ ಉಪಯೋಗವನ್ನು ಪಡೆಯುತ್ತಿದ್ದಾರೆ.

ಸ್ಥಳೀಯ ಕೊಳ್ನಾಡು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಮಹಮ್ಮದ್ ಮಂಚಿ, ಗೌಸಿಯಾ ಅಸೋಸಿಯೇಷನ್ ಅಧ್ಯಕ್ಷ ಅಬೂಬಕ್ಕರ್ ಕೈಯೂರು,ಪದಾಧಿಕಾರಿಗಳಾದ ಅಬ್ದುಲ್ಲಾ ನಾಡಾಜೆ, ಹನೀಫ್, ಮಹಮ್ಮದ್ ಮೂಸಾ, ಇಕ್ಬಾಲ್ ಮಂಚಿ ಅವರು ನಿರತರ ಸೇವೆಯಲ್ಲಿ ತೊಡಗಿಕೊಂಡಿದ್ದು ಪ್ರಶಂಸೆಗೆ ಪಾತ್ರರಾಗಿದ್ದಾರೆ.




