December 19, 2025

ಮಾಣಿಯಲ್ಲಿ ನಡೆದ ಘಟನೆ ಯಲ್ಲಿ ಅಮಾಯಕನ ಬಂಧನ:
SSF ಮಾಣಿ ಸೆಕ್ಟರ್ ವತಿಯಿಂದ ಖಂಡನೆ ಸಭೆ

0
IMG-20211116-WA0009.jpg

ಮಾಣಿ: 3 ದಿನಗಳ ಹಿಂದೆ ಮಾಣಿಯಲ್ಲಿ ಅಪಘಾತ ನಡೆದ ಸ್ಥಳದಲ್ಲಿ ನಡೆದ ಅಮಾನವೀಯ ರೀತಿಯಲ್ಲಿ ಹಲ್ಲೆ ಪ್ರಕರಣದ ವೀಡಿಯೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು ಅದಕ್ಕೆ ಸಂಬಂಧಿಸಿದಂತೆ ನೈಜ ಆರೋಪಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಆರೋಪಿಯನ್ನು ಪತ್ತೆಹಚ್ಚಲು ಆಗದೆ ಮಾಣಿ ಆಸುಪಾಸಿನಲ್ಲಿ ಜಾತಿ, ಸಂಘ, ಪಕ್ಷ, ಬಣ್ಣ ನೋಡಿದೆ ಜನಸೇವೆ ಮಾಡುವಂತಹ ಎಲ್ಲಾ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವ ಅಮಾಯಕ ವ್ಯಕ್ತಿ SYS ಸೂರಿಕುಮೇರ್ ಬ್ರಾಂಚ್ ಸಂಘಟನೆಯ ನಾಯಕರೂ ಆದಂತಹ ಹನೀಫ್ ಸಂಕ ಎಂಬವರನ್ನು ವಿಚಾರಣೆಯ ನೆಪದಲ್ಲಿ ಬಂಧಿಸಿ ಪ್ರಕರಣ ದಾಖಲಿಸಿರುವುದು ಖಂಡನೀಯ.

ಆ ಘಟನೆಯ ವಿಡಿಯೋ ಮತ್ತೋಮ್ಮೆ ಪರಿಶೀಲಿಸಿ ಹನೀಫ್ ಸಂಕ ಅವರನ್ನು ತಕ್ಷಣವೇ ಬಿಡುಗಡೆ ಗೊಳಿಸಬೇಕು, ನೈಜ ಆರೋಪಿಗಳನ್ನು ಬಂಧಿಸಬೇಕು ಎಂದು SSF ಮಾಣಿ ಸೆಕ್ಟರ್ ಕಾರ್ಯದರ್ಶಿ ನೌಫಲ್ ಪೇರಮೊಗರ್, ಕೋಶಾಧಿಕಾರಿ ಅನ್ಶರ್ ಸತ್ತಿಕಲ್ಲು, ಪುತ್ತೂರು ಡಿವಿಷನ್ ಅಧ್ಯಕ್ಷರಾದ ಹಾಫಿಲ್ ತೌಶೀಫ್ ಅಸ್ಅದಿ, ಸೆಕ್ಟರ್ ಉಸ್ತುವಾರಿ ಸಲಾಮ್ ಹನೀಫಿ ಕಬಕ, ಸದಸ್ಯರಾದ ಮುಸ್ತಫಾ ಬುಡೋಳಿ, ಕೆ.ಪಿ ಖಲಂದರ್ ಪಾಟ್ರಕೋಡಿ, ಸಿದ್ದೀಕ್ ಪೆರ್ನೆ,ಸಾಬಿತ್ ಪಾಟ್ರಕೋಡಿ,ಸಾಜೀದ್,ಅಝೀಝ್ ಸತ್ತಿಕಲ್ಲು ಇವರ ಉಪಸ್ಥಿತಿ ಯಲ್ಲಿ SSF ಮಾಣಿ ಸೆಕ್ಟರ್ ಅಧ್ಯಕ್ಷರಾದ ಸೈಯದ್ ಸಾಬಿತ್ ಸಖಾಫಿ ಪಾಟ್ರಕೋಡಿ ಖಂಡನೆ ಸಭೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!