August 13, 2026

ಸ್ನಾನ‌ ಮಾಡದೇ ದೇವಸ್ಥಾನಕ್ಕೆ ಬಂದಿದ್ದ ಮಹಿಳೆಯ ಜುಟ್ಟು ಎಳೆದು ಹಲ್ಲೆ

0
image_editor_output_image-1659054496-1672983278489.jpg

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದೇವಸ್ಥಾನಕ್ಕೆ ಬಂದ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಘಟನೆ 2022ರ ಡಿಸೆಂಬರ್ 22 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಹಿಳೆಯ ಜುಟ್ಟು ಹಿಡಿದು ಧರಧರನೆ ಎಳೆದೊಯ್ದು, ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿರುವ ಈ ಘಟನೆ ಬೆಂಗಳೂರಿನ ಅಮೃತಹಳ್ಳಿಯ ಲಕ್ಷ್ಮೀನಾರಾಯಣ ದೇವಸ್ಥಾನ ದಲ್ಲಿ ನಡೆದಿದೆ.

ಹೇಮಾವತಿ ಎಂಬಾಕೆ ಮೇಲೆ ದೇವಸ್ಥಾನದ ಧರ್ಮದರ್ಶಿ ಮುನಿಕೃಷ್ಣ ಎಂಬಾತ ಇಂತಹ ಹೀನ ಕೃತ್ಯ ಎಸಗಿದ್ದಾನೆ.

ದೇವರ ದರ್ಶನಕ್ಕೆ ತೆರಳಿದ್ದ ಹೇಮಾವತಿಗೆ ಸ್ನಾನ ಮಾಡದೇ, ಶುದ್ಧಿ ಇಲ್ಲದೆ ದೇವಸ್ಥಾನಕ್ಕೆ ಬಂದಿದ್ದೀಯಾ ಎಂದು ಕೂದಲು ಹಿಡಿದು ಹೊರಗೆ ಎಳೆದೊಯ್ದಿದ್ದಾನೆ.

ನಂತರ ಕಬ್ಬಿಣದ ರಾಡ್ ನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಯಾರಿಗಾದರೂ ಹೇಳಿದ್ರೆ ಸರಿಯಿರಲ್ಲ ಅಂತಾ ಅಂತಾ ಜೀವ ಬೆದರಿಕೆ ಕೂಡ ಹಾಕಿದ್ದಾನೆ.

Leave a Reply

Your email address will not be published. Required fields are marked *

You may have missed

error: Content is protected !!