ಜನವರಿ 1ರಿಂದ ಹಳೆಯ ಮೊಬೈಲ್‌ಗಳಲ್ಲಿ ವಾಟ್ಸ್‌ಆ್ಯಪ್ ಕಾರ್ಯ ನಿರ್ವಹಣೆ ಸ್ಥಗಿತ
ಹೊಸದಿಲ್ಲಿ: ಡಿ.31ರ ಅನಂತರ ಹಳೆಯ ಆ್ಯಂಡ್ರಾಯ್ಡ ಮೊಬೈಲ್‌ಗಳಲ್ಲಿ ಮೆಟಾ ಒಡೆತನದ ವಾಟ್ಸ್‌ಆ್ಯಪ್ ಕಾರ್ಯ ನಿರ್ವಹಣೆ ಸ್ಥಗಿತವಾಗಲಿದೆ.
ಸ್ಯಾಮ್‌ಮೊಬೈಲ್ ವರದಿ ಪ್ರಕಾರ, 2011, 2012 ಮತ್ತು 2013ರಲ್ಲಿ ಬಿಡುಗಡೆಯಾದ ಸ್ಯಾಮ್‌ಸಂಗ್ ಸ್ಮಾರ್ಟ್ ಫೋನ್ ಗಳಾದ ಗ್ಯಾಲಕ್ಸಿ ಏಸ್ 2, ಗ್ಯಾಲಕ್ಸಿ ಕೋರ್, ಗ್ಯಾಲಕ್ಸಿ ಎಸ್2, ಗ್ಯಾಲಕ್ಸಿ ಎಸ್3 ಮಿನಿ, ಗ್ಯಾಲಕ್ಸಿ ಟ್ರೆಂಡ್ 2, ಗ್ಯಾಲಕ್ಸಿ ಟ್ರೆಂಡ್ ಲೈಟ್ ಹಾಗೂ ಗ್ಯಾಲಕ್ಸಿ ಎಕ್ಸ್ ಕವರ್2 ಮೊಬೈಲ್‌ಗಳಲ್ಲಿ ಆಂಡ್ರಾಯ್ಡ 4.ಎಕ್ಸ್ ವರೆಗೆ ಮಾತ್ರ ಒಎಸ್ ಅಪ್‌ಡೇಟ್ ಆಗಿರುವುದರಿಂದ ಈ ಸ್ಮಾರ್ಟ್ ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್ ಸಪೋರ್ಟ್ ಮಾಡುವುದಿಲ್ಲ.
ಅದೇ ರೀತಿ ಆ್ಯಪಲ್, ಎಚ್‌ಟಿಸಿ, ಹುವೈ, ಲೆನಾವಾ, ಎಲ್‌ಜಿ, ಸೋನಿ ಸಹಿತ ಇತರ ಮೊಬೈಲ್‌ಗಳಲ್ಲಿ ಡಿ.31ರ ಅನಂತರ ಈ ಸ್ಮಾರ್ಟ್ ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್ ಕೆಲಸ ಮಾಡುವುದು ನಿಲ್ಲಿಸಲಿದೆ ಎಂದು ವರದಿಗಳು ತಿಳಿಸಿವೆ.