February 3, 2026

ತೀವ್ರವಾದ ಉಸಿರಾಟದ ಸೋಂಕು, ಐಎಲ್ಐ ಮೇಲೆ ಹೆಚ್ಚಿನ ನಿಗಾ, ಒಳಂಗಾಣ ಪ್ರದೇಶದಲ್ಲಿ ಮಾಸ್ಕ್: ರಾಜ್ಯ ಸರ್ಕಾರದಿಂದ ಸೂಚನೆ

0
IMG-20221222-WA0013.jpg

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ, ಐಎಲ್ಐ (ILI) ಮತ್ತು ತೀವ್ರವಾದ ಉಸಿರಾಟದ ಸೋಂಕುಗಳು (SARI)ಇರುವವರಿಗೆ ಟೆಸ್ಟ್ ಕಡ್ಡಾಯ, ಒಳಂಗಾಣ ಪ್ರದೇಶದಲ್ಲಿ ಮಾಸ್ಕ್ ಧರಿಸಲು ಸೂಚನೆ ಹಾಗೂ ಕೋವಿಡ್ 3ನೇ ಡೋಸ್ ಲಸಿಕೀಕರಣವನ್ನು ಮತ್ತಷ್ಟು ಚುರುಕುಗೊಳಿಸಲು ರಾಜ್ಯದಲ್ಲಿ ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.

ಕೋವಿಡ್ ನಿಯಂತ್ರಣ ಸಂಬಂಧ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ತಜ್ಞರನ್ನು ಒಳಗೊಂಡಂತೆ ನಡೆದ ಮಹತ್ವದ ಸಭೆ ಕೊನೆಗೊಂಡ ಬಳಿಕ ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

ಇದಲ್ಲದೆ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆ ನಡೆಯುತ್ತಿದ್ದು, ಕೇಂದ್ರದ ನಿರ್ದೇಶನ ಒಳಗೊಂಡ ಕೊರೊನಾ ನಿಯಂತ್ರಣ ಮಾರ್ಗಸೂಚಿ ರಾಜ್ಯ ಸರ್ಕಾರ ಸಂಜೆಯೊಳಗೆ ಪ್ರಕಟ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಗಾಗಿ ಹಾಸಿಗೆ ಮೀಸಲಿಡಲಿದ್ದೇವೆ, ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕಗಳನ್ನು ಸಿದ್ದಪಡಿಸುವುದರ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!