February 3, 2026

ವಿವಾಹವಾಗಲು ವಧು ಹುಡುಕಿ ಕೊಡಿ: ವರರ ಸಂಘದಿಂದ ವಿಶೇಷ ಮೆರವಣಿಗೆ ಮೂಲಕ ಸರ್ಕಾರಕ್ಕೆ ಮನವಿ

0
IMG-20221222-WA0014.jpg

ಸೋಲಾಪುರ: ವಿವಾಹವಾಗಲು ವಧು ಸಿಗುತ್ತಿಲ್ಲವೆಂದು ‘ವರರ ಸಂಘ’ವೊಂದು ಮೆರವಣಿಗೆ ನಡೆಸಿ, ಮದುವೆಯಾಗಲು ವಧುವನ್ನು ಹುಡುಕಿಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿರುವ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದಿದೆ.

‘ವಧು-ವರರ ಮೋರ್ಚಾ’ ಎನ್ನುವ ಸಂಘಟನೆಯ ಸದಸ್ಯರು ವಿಶೇಷ ಬಟ್ಟೆ ಧರಿಸಿ ಮೆರವಣಿಗೆ ಮಾಡಿದ್ದಾರೆ.

ವರರ ಸಂಘ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ, ಮಹಾರಾಷ್ಟ್ರದಲ್ಲಿ ಗಂಡು -ಹೆಣ್ಣು ಅನುಪಾತ ಹೆಚ್ಚಿಸಲು ಪ್ರಸವಪೂರ್ವ ಜಾಗೃತಿ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಮನವಿ ಮಾಡಿದೆ.

ನೂರಾರು ಅವಿವಾಹಿತರು ಮದುವೆ ಬಟ್ಟೆ ಧರಿಸಿ ಬಂದಿದ್ದು, ಇನ್ನು ಕೆಲವರು ಮದುಮಗನ ಹಾಗೆ ಕುದುರೆ ಏರಿ ಆಗಮಿಸಿದ್ದರು. ವಾದ್ಯ ತಂಡದೊಂದಿಗೆ ಮೆರವಣಿಗೆ ಬಂದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!