February 3, 2026

ವಿಟ್ಲ: ಅಳಿಕೆ ಗ್ರಾಮದಿಂದ ಅಗ್ನಿಪಥ್‌‌ಗೆ ಆಯ್ಕೆಯಾದ ಲಕ್ಷ್ಮೀ ಸಾಗರ್: ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿಯಿಂದ ಸನ್ಮಾನ

0
IMG-20221220-WA0018.jpg

ವಿಟ್ಲ: ಅಳಿಕೆ ಗ್ರಾಮದಿಂದ ಅಗ್ನಿಪಥ್ ಗೆ ಆಯ್ಕೆಯಾದ ಏಕೈಕ ಯುವಕ ಲಕ್ಷ್ಮೀ ಸಾಗರ್ ಎರುಂಬು ಅವರನ್ನು ಅವರ ಮನೆಯಲ್ಲಿ ಅಳಿಕೆ ವಲಯ ಕಾಂಗ್ರೆಸ್ ವತಿಯಿಂದ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಸನ್ಮಾನಿಸಿದರು.

ಯುವಕನ ತಾಯಿ ಗೀತಾ ರವೀಂದ್ರ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ ಕೆ. ಬಿ., ಅಳಿಕೆ ವಲಯ ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ ಶೆಟ್ಟಿ ಮುಳಿಯ, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಕೆ., ಉಪಾಧ್ಯಕ್ಷ ಜಗದೀಶ ಶೆಟ್ಟಿ ಮುಳಿಯ, ಸದಸ್ಯರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು, ಸದಾಶಿವ ಶೆಟ್ಟಿ ಅಳಿಕೆ, ರವೀಶ ಕೆ., ಶಾಂಭವಿ ಎಂ., ಸುಧಾಕರ ಎಂ., ಅಬ್ದುಲ್ ಹಮೀದ್ ಕೆ., ಜಯರಾಮ ಎರುಂಬು, ಪ್ರವೀಣ ಪೂಜಾರಿ, ಚಂದ್ರಶೇಖರ ಎರುಂಬು, ವಾಸಪ್ಪ ಕಲ್ಲದಂಬೆ, ಬಾಲಕೃಷ್ಣ ಶೆಟ್ಟಿ, ಸತೀಶ ಶೆಟ್ಟಿ, ನಾಗರಾಜ ಶೆಟ್ಟಿ, ಜನಾರ್ದನ ಪೂಜಾರಿ, ರಾಜೀವ ಬರೆಂಗೋಡಿ, ವಿನಯ ರೈ, ಪ್ರದೀಪ್, ಸುನಿಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!