November 22, 2024

ಕತಾರ್ ವಿಶ್ವಕಪ್ ಫುಟ್ಬಾಲ್: ದಾಖಲಾದ ಒಟ್ಟು ಗೋಲುಗಳು ಎಷ್ಟು ಗೊತ್ತೇ?

0

ದೋಹಾ: ಕ್ರೀಡಾಲೋಕವನ್ನು ಬೆರಗುಗೊಳಿಸಿದ ಕತಾರ್‌ ವಿಶ್ವಕಪ್‌ಗೆ ತೆರೆ ಬಿದ್ದಿದೆ.

ಅರಬ್‌ ನಾಡಿನಲ್ಲಿ ಮೊದಲ ಸಲ ನಡೆದ ಈ ಕ್ರೀಡಾಕೂಟ ಅತ್ಯಂತ ಶಿಸ್ತುಬದ್ಧವಾಗಿ ಸಾಗಿ ಮೆಸ್ಸಿ ಎಂಬ ಮಾಯಾವಿಯ ಬಹುಕಾಲದ ಕನಸನ್ನು ಸಾಕ್ಷಾತ್ಕರಿಸಿತು; ಫ‌ುಟ್‌ಬಾಲ್‌ ಚರಿತ್ರೆಯ ಸ್ಮರಣೀಯ ಅಧ್ಯಾಯವಾಗಿ ಇತಿಹಾಸದ ಪುಟವನ್ನು ಸೇರಿತು. ಹಾಗೆಯೇ ಮುಂದಿನ ಫ‌ುಟ್‌ಬಾಲ್‌ ಜಗತ್ತು ಕೈಲಿಯನ್‌ ಎಂಬಪೆ ಎಂಬ ಮಿಂಚಿನ ಆಟಗಾರನಿಗೆ ಮುಡಿಪು ಎಂಬುದಕ್ಕೆ ಮುನ್ನುಡಿಯನ್ನೂ ಬರೆಯಿತು.

ಮಹಾಸಂಭ್ರಮವೊಂದು ಮುಗಿದ ಬಳಿಕ ಹಿನ್ನೋಟ ಹಾಯಿಸಿದಾಗ ಕಂಡುಬರುವ ಸ್ವಾರಸ್ಯಗಳಿಗೆ, ದಾಖಲೆಗಳಿಗೆ ಕೊನೆ ಇರದು. ಇದಕ್ಕೆ ಕತಾರ್‌ ಕೂಟವೂ ಹೊರತಲ್ಲ. ಈ ಪಂದ್ಯಾವಳಿಯ ಬಹುದೊಡ್ಡ ದಾಖಲೆಯೆಂದರೆ, ಅತ್ಯಧಿಕ ಸಂಖ್ಯೆಯ ಗೋಲುಗಳದ್ದು.

ಫೈನಲ್‌ಮುಖಾಮುಖಿಯಲ್ಲಿ 6 ಗೋಲು ಸಿಡಿದುದರಿಂದ ಗೋಲುಗಳ ಒಟ್ಟು ಸಂಖ್ಯೆ 172ಕ್ಕೆ ಏರಿತು. ಇದರೊಂದಿಗೆ ವಿಶ್ವಕಪ್‌ ಚರಿತ್ರೆಯಲ್ಲಿ ಅತ್ಯಧಿಕ ಗೋಲುಗಳನ್ನು ಕಂಡ ದಾಖಲೆ ಕತಾರ್‌ ಪಂದ್ಯಾವಳಿಯದ್ದಾಯಿತು.

ಹಿಂದಿನ ದಾಖಲೆ 171 ಗೋಲ್‌. 1998 ಮತ್ತು 2014ರಲ್ಲಿ ಈ ದಾಖಲೆ ನಿರ್ಮಾಣಗೊಂಡಿತ್ತು. 1998ರ ಫ್ರಾನ್ಸ್‌ ಕೂಟದಲ್ಲಿ ಮೊದಲ ಸಲ 32 ತಂಡಗಳು ಕಣಕ್ಕಿಳಿದಿದ್ದವು. 64 ಪಂದ್ಯಗಳು ನಡೆದಿದ್ದವು.

Leave a Reply

Your email address will not be published. Required fields are marked *

error: Content is protected !!