March 20, 2026

ಕಾಲುವೆಯಲ್ಲಿ ಈಜಲು ಹೋಗಿದ್ದ 6 ವಿದ್ಯಾರ್ಥಿಗಳ ಪೈಕಿ ಮೂವರು ನೀರುಪಾಲು

0
image_editor_output_image-1654848310-1671276469929.jpg

ಬಳ್ಳಾರಿ: ಕಾಲುವೆಯಲ್ಲಿ ಈಜಲು ಹೋಗಿದ್ದ ಆರು ವಿದ್ಯಾರ್ಥಿಗಳ ಪೈಕಿ ಮೂವರು ನೀರುಪಾಲಾಗಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊರವಲಯದಲ್ಲಿ ನಡೆದಿದೆ.

ಮೃತರನ್ನು ಹೊಸಪೇಟೆಯ ಹಾಗೂ ಕೊಪ್ಪಳದ ನಿವಾಸಿಗಳಾದ ಯಶವಂತ್, ಅಂಜಿನಿ, ಗುರುರಾಜ್ ಎಂದು ಗುರುತಿಸಲಾಗಿದೆ.

ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಓದುತ್ತಿದ್ದ 6 ವಿದ್ಯಾರ್ಥಿಗಳ ತಂಡ ಈಜಲು ಹೋಗಿತ್ತು. ಈ ವೇಳೆ ಮೂವರು ನೀರಿನಲ್ಲಿ ಮಳುಗಿದ್ದು ಇನ್ನು ಮೂವರು ಬದುಕುಳಿದಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹೊಸಪೇಟೆಯ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದರು.

ಇನ್ನು ಬದುಕುಳಿದಿರುವ ಮೂವರು ವಿದ್ಯಾರ್ಥಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!