March 20, 2026

ಕಾಲೇಜಿಗೆ ತೆರಳಿದ್ದ ನವ ವಿವಾಹಿತೆ ನದಿ‌ಯಲ್ಲಿ ಶವವಾಗಿ ಪತ್ತೆ

0
IMG-20221217-WA0011.jpg

ಕಲಬುರಗಿ: ಕಾಲೇಜಿಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ನವವಿವಾಹಿತೆ ನದಿ‌ಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕಲಬುರಗಿಯ ಕಮಲಾಪುರ ತಾಲೂಕಿನ ಕುರಿಕೋಟಾದಲ್ಲಿ ನಡೆದಿದೆ.

ಮೃತಳನ್ನು ನಾವದಗಿ ಗ್ರಾಮದ ಸೃಷ್ಟಿ‌ ಮಾರುತಿ (21) ಎಂದು ಗುರುತಿಸಲಾಗಿದೆ.

ಡಿಗ್ರಿ ಐದನೇಯ ಸೇಮಿಸ್ಟರ್‌ನಲ್ಲಿ ಓದುತ್ತಿದ್ದ ಸೃಷ್ಟಿಗೆ ಇತ್ತೀಚೆಗೆ ಮದುವೆಯಾಗಿದ್ದು, ಅತ್ತೆಯ ಮನೆಯಲ್ಲಿದ್ದೇ ವ್ಯಾಸಂಗ ಮಾಡುತ್ತಿದ್ದ ಸೃಷ್ಟಿ ಡಿಸೆಂಬರ್ 13 ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿದ್ದರು. ಸಂಜೆಯಾದ್ರೂ ಮನೆಗೆ ಬಾರದ ಹಿನ್ನೆಲೆ ಗಂಡ ಮತ್ತು ಆತನ ಕುಟುಂಬಸ್ಥರು ಗಾಬರಿಗೊಂಡು ಗ್ರಾಮವೆಲ್ಲ ಹುಡುಕಾಟ ನಡೆಸಿದ್ದರು ಯಾವುದೇ ಪ್ರಯೋಜನವಾಗಿರಲಿಲ್ಲ.

ಇನ್ನು ಸೃಷ್ಟಿ ಗಂಡನ ಕುಟುಂಬಸ್ಥರು ಡಿಸೆಂಬರ್​ 14ರ ಬೆಳಗ್ಗೆ ಮಹಾಗಾಂವ್​ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದರು.

ಮನೆಯಿಂದ ಕಾಣೆಯಾಗಿ ಮೂರು ದಿನಗಳ ನಂತರ ಸೃಷ್ಟಿ ಕುರಿಕೋಟಾ ಸೇತುವೆ ಬಳಿ ಶವವಾಗಿ ಪತ್ತೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!