February 2, 2026

ಮಿನಿಬಸ್‌ ಅಪಘಾತ: 10 ವರ್ಷದ ಬಾಲಕಿ ಮೃತ್ಯು, 12 ಮಂದಿಗೆ ಗಾಯ

0
image_editor_output_image-1956154904-1671205302784.jpg

ಕೊಟ್ಟಾಯಂ: ಶಬರಿಮಲೆಗೆ ಯಾತ್ರೆ ಹೊರಟಿದ್ದ ಮಿನಿಬಸ್‌ ಅಪಘಾತಕ್ಕೀಡಾಗಿ 10 ವರ್ಷದ ಬಾಲಕಿ ಮೃತಪಟ್ಟು, 12 ಮಂದಿ ಗಾಯಗೊಂಡ ಘಟನೆ ಕೇರಳದ ಕೊಟ್ಟಾಯಂನ ಎರುಮಲೆ ಪ್ರದೇಶದಲ್ಲಿ ಶುಕ್ರವಾರ ಸಂಭವಿಸಿದೆ.

ಮಿನಿಬಸ್‌ನಲ್ಲಿ ಐವರು ಮಕ್ಕಳು ಸೇರಿದಂತೆ ಒಟ್ಟು 20 ಮಂದಿ ಶಬರಿಮಲೆಗೆ ತೆರಳುತ್ತಿದ್ದರು. ಕೊಟ್ಟಾಯಂನ ಎರುಮಲೆ ಪ್ರದೇಶದ ಕಡಿದಾದ ತಿರುವಿನಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಮಿನಿಬಸ್‌ ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಸರಿದು ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ಒಬ್ಬ ಬಾಲಕಿ ಅಸುನೀಗಿದ್ದು, 12 ಮಂದಿ ಯಾತ್ರಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!