ಕಲ್ಲಡ್ಕ: ಬಸ್ಸಿನಲ್ಲಿ ಅನ್ಯಕೋಮಿನ ಯುವಕ ಜತೆ ಯುವತಿ ಪ್ರಯಾಣ: ಬಸ್ ತಡೆದು ನಿಲ್ಲಿಸಿದ ಭಜರಂಗದಳ
ಬಂಟ್ವಾಳ: ಅನ್ಯಕೋಮಿನ ಯುವಕನ ಜೊತೆಯಲ್ಲಿ ಯುವತಿಯೋರ್ವಳು ಬೆಂಗಳೂರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ಧಾಳೆ ಎಂಬ ಕಾರಣಕ್ಕಾಗಿ ಹಿಂದೂ ಸಂಘಟನೆಯ ಕಾರ್ಯಕರ್ತರು ಬಸ್ ತಡೆದು ನಿಲ್ಲಿಸಿದ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ನಡೆದಿದೆ.

ಮಂಗಳೂರಿನಿಂದ ಬಸ್ ನಲ್ಲಿ ಅನ್ಯಕೋಮಿನ ಯುವಕನ ಜೊತೆ ಯುವತಿಯೋರ್ವಳು ಪ್ರಯಾಣಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಕಲ್ಲಡ್ಕ ಪ್ರಖಂಡದ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಕಾರ್ಯಕರ್ತರು ದಾಸಕೋಡಿ ಎಂಬಲ್ಲಿ ಬಸ್ ತಡೆದು ನಿಲ್ಲಿಸಿದ್ದಾರೆ
ಅ ಬಳಿಕ ಬಸ್ ನಲ್ಲಿ ಕಾರ್ಯಕರ್ತರು ಹಾಗೂ ಪ್ರಯಾಣಿಕ ರ ಮಧ್ಯೆ ಮಾತಿನ ಚಕಮಕಿ ನಡೆದ ವಿಡಿಯೋ ವೈರಲ್ ಆಗಿದೆ.
ಘಟನೆ ನಡೆದ ಸ್ಥಳಕ್ಕೆ ಪೋಲೀಸರು ಆಗಮಿಸಿ ಕಾರ್ಯ ಕರ್ತರು ಹಾಗೂ ಇಬ್ಬರು ಪ್ರಯಾಣಿಕರು ಠಾಣೆಗೆ ತೆರಳಿದ್ದಾರೆ.
ಠಾಣೆಯಲ್ಲಿ ಮಾತುಕತೆ ಬಳಿಕ ಮನೆಯವರಿಗೆ ತಿಳಿಸಿ ಮನೆಯವರ ಜೊತೆ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.





