ಕೌಲಾಲಂಪುರ್: ಭೂಕುಸಿತಕ್ಕೆ ಮಂದಿ 8 ಬಲಿ, 50ಕ್ಕೂ ಹೆಚ್ಚು ಮಂದಿ ನಾಪತ್ತೆ
ಕೌಲಾಲಂಪುರ್: ನಗರದ ಕ್ಯಾಂಪ್ ಪ್ರದೇಶದ ಬಳಿ ಬೆಳಗ್ಗಿನ ಜಾವ ಸಂಭವಿಸಿದ ಭೂಕುಸಿತಕ್ಕೆ 8 ಮಂದಿ ಬಲಿಯಾಗಿದ್ದು, 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಮಲೇಷ್ಯಾದ ರಾಜಧಾನಿ ಕೌಲಾಲಂಪುರ್‌ನ ಕ್ಯಾಂಪ್ ಪ್ರದೇಶದಲ್ಲಿ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದೆ.
ಕ್ಯಾಂಪಿಂಗ್ ಪ್ರದೇಶವಾಗಿರುವ ಸೆಲಂಗೋರ್‌ನಲ್ಲಿ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಈಗಾಗಲೇ 8 ಮಂದಿಯ ಮೃತ ದೇಹ ಸಿಕ್ಕಿದೆ. 50ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಗ್ನಿಶಾಮಕ ದಳ ಮತ್ತು ರಕ್ಷಣಾ ಪಡೆ ಮಾಹಿತಿ ಹಂಚಿಕೊಂಡಿದೆ.




