November 13, 2024

‘ನನ್ನ ಮತ್ತು ಯಡಿಯೂರಪ್ಪ ನಡುವೆ ತಂದೆ ಮಗನ ಸಂಬಂಧವಿದೆ’ – ಸಿಎಂ ಬೊಮ್ಮಾಯಿ

0

ಕೊಪ್ಪಳ: ನನ್ನ ಮತ್ತು ಬಿ ಎಸ್ ಯಡಿಯೂರಪ್ಪನವರ ಮಧ್ಯೆ ತಂದೆ-ಮಗನ ಸಂಬಂಧವಿದೆ. ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಎನ್ನುವುದು ಹಗಲುಗನಸಾಗಿದ್ದು, ಹೀಗಾಗಿ ಯಾವುದೇ ಕಾರಣಕ್ಕೂ ಅದರಲ್ಲಿ ಅಪಸ್ವರ ಬರಲು ಸಾಧ್ಯವಿಲ್ಲಎಂದು ಮುಖ್ಯಮಂತ್ರಿ ಬಸವರಾಜ ‌ಬೊಮ್ಮಾಯಿ ಹೇಳಿದರು.

ಕೊಪ್ಪಳದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮಿಬ್ಬರ ನಡುವಿನ ಸಂಬಂಧ ಹಳಸಿದೆ ಎನ್ನುವುದು ಸುಳ್ಲು ಸುದ್ದಿ, ಯಡಿಯೂರಪ್ಪ ನಮ್ಮ ಪರಮೋಚ್ಛ ನಾಯಕರು. ನಮಗೆ ಅವರ ಮಾರ್ಗದರ್ಶನದ ಅಗತ್ಯವಿದೆ ಎಂದರು.

ರಾಜ್ಯದ ಜನತೆಯನ್ನು ತಪ್ಪುದಾರಿಗೆಳೆಯುವ ಸುಳ್ಳು ಸುದ್ದಿಯನ್ನು ಹರಡಿಸಲು ಗೊಂದಲ ಸೃಷ್ಟಿಸಲು ಕಾಂಗ್ರೆಸ್‌ ಏನಾದರೂ ಯೋಜನೆ ಮಾಡಿದ್ದರೆ ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ಮನೆಯೊಂದು ಬಾಗಿಲು ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ ಅವರಿಗೆ ಬಾಗಿಲು ಇಲ್ಲ, ಕಿಟಕಿಯೂ ಇಲ್ಲ. ಎಲ್ಲಾ ಬಟಾಬಯಲು ಎಂದು ತಿರುಗೇಟು ನೀಡಿದರು

Leave a Reply

Your email address will not be published. Required fields are marked *

error: Content is protected !!