September 29, 2026

ಬೆಳಗಾವಿಯಲ್ಲಿ ಮರಾಠಿ ಭಾಷಿಕ ಪುಂಡರು ಪುಂಡಾಟ: ಕರ್ನಾಟಕ  ಸರ್ಕಾರಿ ವಾಹನಕ್ಕೆ ಕಲ್ಲು ತೂರಾಟ

0
image_editor_output_image1792526219-1671099452912.jpg

ಬೆಳಗಾವಿ: ಅಧಿವೇಶನ ಮುನ್ನವೇ ಬೆಳಗಾವಿಯಲ್ಲಿ ಮರಾಠಿ ಭಾಷಿಕ ಪುಂಡರು ಪುಂಡಾಟ ಪ್ರದರ್ಶನ ಮುಂದುವರಿಸಿದ್ದು, ಅಧಿವೇಶನದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕರ್ನಾಟಕ ಸರ್ಕಾರಿ ವಾಹನ ಮೇಲೆ ಕಲ್ಲು ತೂರಿ ವಿಕೃತಿ ಮೆರೆದಿದ್ದಾರೆ.

ತಾಲೂಕಿನ ಹೊರವಲಯದ ಸುವರ್ಣಸೌಧದ ಬಳಿ ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿದ್ದ ಸರ್ಕಾರಿ ವಾಹನದ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

 

ಕರ್ನಾಟಕ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ಸೇರಿದ ಕರ್ನಾಟಕ ಸರ್ಕಾರ ಎದು ಬರೆದ ವಾಹನ ಅಡ್ಡಗಟ್ಟಿ, ಕಲ್ಲು ತೋರಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಕರ್ನಾಟಕ ರಾಜ್ಯ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ವಾಹನ ಚಾಲಕ ಚೇತನ್ ಎಂಬುವವರಿಗೂ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!