March 20, 2026

ಸಾಕ್ಷ್ಯ ನಾಶಕ್ಕಾಗಿ ನೋಟಿನ ಕಂತೆಯನ್ನು ಬಾಯೊಳಗೆ ತುರುಕಿಸಿದ ಪೊಲೀಸ್..!

0
DB-10122022-police.jpg

ಹರಿಯಾಣ: ವ್ಯಕ್ತಿಯೊಬ್ಬನಿಂದ ಪೊಲೀಸ್ ಪೇದೆಯೊಬ್ಬ ಹಣ ಪಡೆದುಕೊಳ್ಳುತ್ತಿರುವ ಜಾಗೃತದಳದ ಅಧಿಕಾರಿಗಳ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಘಟನೆ ಹರಿಯಾಣದ ಫರೀದಾಬಾದ್‌ನಲ್ಲಿ ನಡೆದಿದೆ.

ಈ ವೇಳೆ ಸಾಕ್ಷ್ಯ ನಾಶಕ್ಕಾಗಿ ಪೊಲೀಸ್ ಪೇದೆಯು ಹಣದ ಕಂತೆಯನ್ನೇ ನುಂಗಲೆತ್ನಿಸಿದ್ದಾರೆ!

ಎಸ್‌ ಐ ಮಹೇಂದ್ರ ಉಲಾ ಅವರೇ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಪೊಲೀಸ್. ಶಂಭುನಾಥ್ ಎಂಬ ವ್ಯಕ್ತಿಯು ಕಳೆದು ಹೋಗಿರುವ ತನ್ನ ಎಮ್ಮೆಯನ್ನು ಹುಡುಕಿಕೊಡುವಂತೆ ಮಹೇಂದ್ರ ಅವರ ಬಳಿ ಹೋಗಿ ಮನವಿ ಮಾಡಿದ್ದರು. ಆರೋಪಿಗಳ ಪತ್ತೆಗೆ ಮಹೇಂದ್ರ 10 ಸಾವಿರ ರೂ. ಬೇಡಿಕೆಯಿಟ್ಟಿದ್ದರು. ಇದರಿಂದ ಶಂಭುನಾಥ್ ಹಂತ ಹಂತವಾಗಿ 400 ರೂ.ಗಳನ್ನು ನೀಡಿದ್ದು, ಬಳಿಕ ಜಾಗೃತ ದಳದ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಬಳಿಕ ಮಹೇಂದ್ರ ಅವರಿಗೆ ಹಣ ನೀಡಲೆಂದು ಶಂಭುನಾಥ್ ಹೋಗಿದ್ದು, ಈ ವೇಳೆ ದೂರದಲ್ಲಿ ನಿಂತಿದ್ದ ಜಾಗೃತ ದಳದ ಅಧಿಕಾರಿಗಳು ಮಹೇಂದ್ರ ಅವರು ಹಣ ಪಡೆದುಕೊಳ್ಳುತ್ತಿರುವಾಗಲೇ ದಾಳಿ ನಡೆಸಿ ರೆಡ್‌ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಅಧಿಕಾರಿಗಳ ದಾಳಿಯಿಂದ ವಿಚಲಿತನಾದ ಮಹೇಂದ್ರ ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಹಣದ ನೋಟುಗಳನ್ನು ಕೂಡಲೇ ಬಾಯೊಳಗೆ ಹಾಕಿಕೊಂಡಿದ್ದಾರೆ. ಈ ವೇಳೆ ಮಹೇಂದ್ರ ಅವರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!