ವಿಟ್ಲ: ಕಿಟ್ ಕ್ಯಾಟ್ ಪೆಟ್ ಶಾಫ್ ಶುಭಾರಂಭ: ಸಾಕು ಪ್ರಾಣಿಗಳ ಔಷಧಿ ಮತ್ತು ಆಹಾರ ಮಳಿಗೆ
ವಿಟ್ಲ: ವಿಟ್ಲದ ನಾಲ್ಕು ಮಾರ್ಗದ ಜಂಕ್ಷನ್ ಬಳಿ ಸಾಕು ಪ್ರಾಣಿಗಳ ಆಹಾರದ ಕಿಟ್ ಕ್ಯಾಟ್ ಪೆಟ್ ಶಾಫ್ ಶುಭಾರಂಭಗೊಂಡಿತು.
ಕೊಡಂಗೆ ಜುಮಾ ಮಸೀದಿ ಖತೀಬ್ ಇಬ್ರಾಹಿಂ ಅಲ್ ಕಾಮಿಲ್ ಸಖಾಫಿ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು.
ವಿಟ್ಲದ ಪಶು ವೈದ್ಯಾಧಿಕಾರಿ ಕಾಶಿಮಠ ಈಶ್ವರ ಭಟ್, ಸುಶೀಲಾ ಶಿವರಾಮ್ ಅಳಿಕೆ ,ಅಬ್ಲಲ್ಲಾ ಕುಂಞಿ ಒಕ್ಕೆತ್ತೂರು,ಶಮೀರ್ ಪಳಿಕೆ ಮುಂತಾದವರು ಮುಖ್ಯ ಅತಿಥಿಗಳಾಗಿದ್ದರು.
ಡಾ.ಮಂದಾರ ಜೈನ್,ಡಾ.ಹೆಂಡ್ರಿ ಕೊಯಿಲ,ಪರಮೇಶ್ವರ ಅಡ್ಯನಡ್ಕ,ಸಿ.ಕೆ.ಗೌಡ, ಅಶೋಕ್ ಕುಮಾರ್ ಶೆಟ್ಟಿ, ಡಿ.ಬಿ ಅಬೂಬಕರ್, ವಿಟ್ಲ ಮಲ್ಟಿ ಜಿಮ್ ಮಾಲಕ ಸುನೀಲ್ ಪಾಯಸ್, ಮುಂತಾದವರು ಶುಭ ಹಾರೈಸಿದರು.
.ಲೇಖಕ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಇಸ್ಮಾಯಿಲ್ ಒಕ್ಕೆತ್ತೂರು ನೇತೃತ್ವದಲ್ಲಿ ಶುಭಾರಂಭಗೊಂಡ ಸಂಸ್ಥೆಯಲ್ಲಿ ನಾಯಿ, ಬೆಕ್ಕುಗಳ ವಿವಿಧ ಔಷಧಿ ಮತ್ತು ಆಹಾರ ಇಲ್ಲಿ ದೊರೆಯಲಿದೆ.







