September 29, 2026

ಪಡೀಲ್: ಸುತ್ತಾಡುತ್ತಿದ್ದ ಯುವಕ, ಯುವತಿಯರ ಮೇಲೆ ಬಜರಂಗದಳದ ಕಾರ್ಯಕರ್ತರಿಂದ ಹಲ್ಲೆಗೆ ಯತ್ನ

0
image_editor_output_image-651611084-1670738629309.jpg

ಮಂಗಳೂರು: ತಡರಾತ್ರಿ ಸುತ್ತಾಡುತ್ತಿದ್ದ ಯುವಕ, ಯುವತಿಯರ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿರುವ ಘಟನೆ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ಶನಿವಾರ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.

ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ಯುವಕ, ಯುವತಿಯರು ಮಂಗಳೂರು ನಗರದ ಕೊಟ್ಟಾರದ ಹೊಟೇಲ್ ವೊಂದಕ್ಕೆ ಊಟ ಮಾಡಲು ಬಂದಿದ್ದರು ಎನ್ನಲಾಗಿದೆ.

 

ಇವರನ್ನು ಕಂಡ ಬಜರಂಗದಳದ ಕಾರ್ಯಕರ್ತರು “ಮಧ್ಯರಾತ್ರಿ ಯಾವ ಹೊಟೇಲ್ ಇದೆ ಅಂತ ಹೇಳಿ” ಹಲ್ಲೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ. ಪೊಲೀಸರು ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ತಿಳಿಗೊಳಿಸಿ, ಯುವಕ, ಯುವತಿಯರನ್ನು ಮನೆಗೆ ಕಳುಹಿಸಲಾಯಿತು.

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರುಗಳು ದಾಖಲಾಗಿಲ್ಲ.

Leave a Reply

Your email address will not be published. Required fields are marked *

You may have missed

error: Content is protected !!